ಮನೋರಂಜನೆ

ಐಶ್ವರ್ಯ ರೈ ಬಚ್ಚನ್​ಗೆ ‘ವರ್ಷದ ಗ್ಲೋಬಲ್ ಇಂಡಿಯನ್’ ಪ್ರಶಸ್ತಿ

Pinterest LinkedIn Tumblr

aishwarya-rai

ಮುಂಬೈ: ಚಿತ್ರ ನಟಿ ಐಶ್ವರ್ಯ ರೈ ಬಚ್ಚನ್ ಅವರು ಪ್ರಸ್ತುತ ವರ್ಷದ ’ಗ್ಲೋಬಲ್ ಇಂಡಿಯನ್’ ಪ್ರಶಸ್ತಿಯನ್ನು ಗೆದ್ದುಗೊಂಡಿದ್ದಾರೆ.

ಮುಂಬೈಯಲ್ಲಿ ನಡೆದ ವರ್ಷದ ಅನಿವಾಸಿ ಭಾರತೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಐಶ್ವರ್ಯ ಅವರನ್ನು ‘ವರ್ಷದ ಗ್ಲೋಬಲ್ ಇಂಡಿಯನ್’ ಪ್ರಶಸ್ತಿ ನೀಡಿ ಸೋಮವಾರ ಸಂಜೆ ಗೌರವಿಸಲಾಯಿತು. 42ರ ಹರೆಯದ ಚಿತ್ರನಟಿ ಪ್ರಶಸ್ತಿಯನ್ನು ತಮ್ಮ ಪುತ್ರಿ ಆರಾಧ್ಯಳಿಗೆ ಅರ್ಪಿಸಿದರು.

‘ವಿಶ್ವ ಸುಂದರಿ ಸ್ಪರ್ಧೆಯ ಕಾಲದಿಂದಲೂ ಭಾರತೀಯ ಮಹಿಳೆ ವಿಶ್ವ ವೇದಿಕೆಯಲ್ಲಿ ಮಿಂಚಬೇಕೆಂಬ ಗುರಿಯನ್ನು ನಾನು ಇಟ್ಟುಕೊಂಡಿದ್ದೆ. ಭಾರತೀಯ ಮಹಿಳೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಲು ಇದು ಒಳ್ಳೆಯ ಅವಕಾಶ ಎಂದು ನಾನು ನಂಬಿದ್ದೆ. ಅಂದಿನಿಂದ ಈಗ 2016ರವರೆಗೂ ಇದು ಮುಂದುವರೆಯುತ್ತಲೇ ಬಂದಿದೆ’ ಎಂದು ಐಶ್ವರ್ಯ ರೈ ಹೇಳಿಕೆಯಲ್ಲಿ ತಿಳಿಸಿದರು.

Write A Comment