ಕರಾವಳಿ

ಚೆಸ್ ಬುದ್ದಿ ಶಕ್ತಿ ವಿನಿಯೋಗದ ಆಟ: ರೋ. ಅಲೆನ್ ಲೇವಿಸ್

Pinterest LinkedIn Tumblr

1 NEWS

ರೋಟರಿ ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್ ರೋ. ಅಲೆನ್ ಲೇವಿಸ್ ರವರು ಚೆಸ್ ಬುದ್ದಿ ಶಕ್ತಿ ವಿನಿಯೋಗದ ಆಟ, ಬಾಲ್ಯದಿಂದ ಮಕ್ಕಳು ಚೆಸ್ ನಲ್ಲಿ ತಮ್ಮನ್ನು ತೊಡಗಿಕೊಳ್ಳುವುದರಿಂದ ತಮ್ಮ ಬುದ್ದಿಮತ್ತೆಯನ್ನು ಹೆಚ್ಚಿಸಕೊಳ್ಳ ಬಹುದೆಂದೆ ಹೇಳಿದರು. ಶ್ರೀಯುತರು ಹಿರಿಯಡಕದ ಶ್ರೀ ರಾಮ ಮಂದಿರದಲ್ಲಿ ಏಪ್ರಿಲ್ 11ರಂದು ಪ್ರಾರಂಭವಾದ ಚೆಸ್ ತರಬೇತಿ ಶಿಬಿರವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು. ಈ ಶಿಭಿರವನ್ನು ರೋಟರಿ ಕ್ಲಬ್ ಮಣಿಪಾಲ ಟೌನ್, ಪಳ್ಳಿ ಶ್ರೀನಿವಾಸ ಹೆಗ್ಡೆ ಚಾರಿಟೇಬಲ್ ಟ್ರಸ್ಟ್, ಕೊಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್, ನರ್ತಕಿ ಫ್ರೆಂಡ್ಸ್ ಸೇವಾ ಟ್ರಸ್ಟ್ ಮತ್ತು ಜಿ.ಎಸ್.ಬಿ ಸೇವಾ ಸಮಿತಿ ಇವರುಗಳ ಜಂಟೀ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

DSC_0063

DSC_0065

DSC_0067

DSC_0069

DSC_0071

DSC_0073

DSC_0084

DSC_0089

ಈ ಸಂದರ್ಭದಲ್ಲಿ ಪಳ್ಳಿ ಶ್ರೀನಿವಾಸ ಹೆಗ್ಡೆ ಚಾರಿಟೇಬಲ್ ಟ್ರಸ್‍ನ ಕಾರ್ಯದರ್ಶಿ ನಟರಾಜ ಹೆಗ್ಡೆ, ಕೊಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ದಿವಾಕರ ಭಂಡಾರಿ, ನರ್ತಕಿ ಫ್ರೆಂಡ್ಸ್ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷರಾದ ಶ್ರೀ ಪ್ರಭಾಕರ ಶೆಟ್ಟಿ, ತರಬೇತೀದಾರದ ಡಾ. ಗುರುಮೂರ್ತಿ ಎಸ. ಸಿ ಇವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ರಾಜಶ್ರೀ ಇವರ ಪ್ರಾರ್ಥನೆಯಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ, ನರ್ತಕಿ ಟ್ರಸ್ಟ್ ನ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿ, ರೋಟರಿ ಮಣಿಪಾಲ ಟೌನ್ ನ ಕಾರ್ಯದರ್ಶಿ ರೋ. ರಾಘವೇಂದ್ರ ಜಿ ವಂದಿಸಿದರು, ಕಾರ್ಯಕ್ರಮವನ್ನು ಬಾಲಕೃಷ್ಣ ಬಿ ಕೆ ಇವರು ನಿರ್ವಹಿಸಿದರು ರವಿ ಶೆಟ್ಟಿ ಸಹಕರಿಸಿದರು.

Write A Comment