ಮನೋರಂಜನೆ

ಪನಾಮಾ ದಾಖಲೆ ಸೋರಿಕೆ, ಬಾಲಿವುಡ್ ನಟರು, ಉದ್ಯಮಿಗಳು, ರಾಜಕೀಯ ವ್ಯಕ್ತಿಗಳ ಹೆಸರು ಬಹಿರಂಗ

Pinterest LinkedIn Tumblr

main-image

ಮುಂಬೈ: ಸರ್ಕಾರಕ್ಕೆ ತೆರಿಗೆ ಕಟ್ಟದೆ ವಂಚಿಸಿ ಹಣವನ್ನು ರಹಸ್ಯ ಕಾನೂನು ಸಂಸ್ಥೆ ಮೊಸ್ಸಾಕ್ ಫೊನ್ಸಿಕಾದಲ್ಲಿ ಇಟ್ಟವರಲ್ಲಿ ಬಾಲಿವುಡ್ ನ ಖ್ಯಾತ ನಟರು, ಉದ್ಯಮಿಗಳು, ರಾಜಕೀಯ ವ್ಯಕ್ತಿಗಳು ಸೇರಿದಂತೆ ಸುಮಾರು 500 ಮಂದಿ ಭಾರತೀಯರು ಇದ್ದಾರೆ ಎಂದು ಪನಾಮಾ ಪೇಪರ್ ಸೋರಿಕೆಯಲ್ಲಿ ಬಹಿರಂಗಗೊಂಡಿದೆ.ಇದು 1.15 ಕೋಟಿ ಸೋರಿಕೆ ದಾಖಲೆಗಳನ್ನೊಳಗೊಂಡಿದೆ.

ಪಟ್ಟಿಯಲ್ಲಿ ಪ್ರಮುಖ ಭಾರತೀಯರಾದ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್, ಪ್ರಮುಖ ಉದ್ಯಮಿಗಳಾದ ಡಿಎಲ್ ಎಫ್ ನ ಕೆ.ಪಿ.ಸಿಂಗ್ ಮತ್ತು ಅವರ ಕುಟುಂಬದ 9 ಮಂದಿ ಹೆಸರುಗಳಿವೆ. ಗೌತಮ್ ಅದಾನಿಯವರ ಹಿರಿಯ ಸಹೋದರ ವಿನೋದ್ ಅದಾನಿ, ಇಂಡಿಯ ಬುಲ್ಸ್ ಪ್ರಚಾರಕ ಸಮೀರ್ ಗೆಹ್ಲೋಟ್, ಅಪೊಲ್ಲೋ ಟೈರ್ಸ್, ಇನ್ನು ರಾಜಕೀಯ ವ್ಯಕ್ತಿಗಳಾದ ಪಶ್ಚಿಮ ಬಂಗಾಳದ ಶಿಶಿರ್ ಬಜೋರಿಯಾ, ಅನುರಾಗ್ ಕೇಜ್ರಿವಾಲ್ ಹೆಸರುಗಳಿವೆ.

ಇವರು ಆದಾಯ ತೆರಿಗೆ ಇಲಾಖೆಗೆ ತೆರಿಗೆಯನ್ನು ಸರಿಯಾಗಿ ಕಟ್ಟದೆ ಮೊಸ್ಸಾಕ್ ಫೊನ್ಸಿಕಾ ಮೂಲಕ ವಿದೇಶಗಳಲ್ಲಿ ಕಂಪೆನಿಗಳನ್ನು ಸ್ಥಾಪಿಸಲು ನೆರವಾಗಿದೆ.

ಸೋರಿಕೆಗೊಂಡ ಪನಾಮಾ ಪೇಪರ್ ನಲ್ಲಿ 1977ರಿಂದ ಇಲ್ಲಿಯವರೆಗಿನ ದಾಖಲೆಗಳು ಇವೆ.
2004ರಲ್ಲಿ ಬಂದ ಕಾನೂನಿನ ಪ್ರಕಾರ ಇಚ್ಛೆಬಂದ ಹಾಗೆ ವಿದೇಶಗಳಲ್ಲಿ ಕಂಪೆನಿಗಳಲ್ಲಿ ಭಾರತೀಯರು ಹೂಡಿಕೆ ಮಾಡುವಂತಿಲ್ಲ. ಅದಕ್ಕೆ ಮುಂಚೆ ಕಾನೂನು ಸ್ವಲ್ಪ ಸಡಿಲವಾಗಿತ್ತು. ಈ ಅವಧಿಯಲ್ಲಿಯೇ ವಿದೇಶಗಳಲ್ಲಿ ಹೂಡಿಕೆ ಮಾಡಲಾಗಿದೆ.

ಕೇಂದ್ರ ಸರ್ಕಾರ ವಿದೇಶಗಳಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರುವ ಬಗ್ಗೆ ಯೋಚಿಸುತ್ತಿರುವಾಗಲೇ ಪನಾಮಾ ದಾಖಲೆ ಸೋರಿಕೆಯಾಗಿದೆ.

Write A Comment