ಮುಂಬೈ

ಯುಬಿ ಹೊಲ್ಡಿಂಗ್ಸ್ ನಿರ್ದೇಶಕ ಹುದ್ದೆಗೆ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ ರಾಜಿನಾಮೆ

Pinterest LinkedIn Tumblr

Siddharth-Mallya

ಮುಂಬೈ: ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ಪುತ್ರ ಸಿದ್ಧಾರ್ಥ ಮಲ್ಯ ಅವರು ಯುನೈಟೆಡ್ ಬ್ರೇವರೀಸ್ (ಹೋಲ್ಡಿಂಗ್ಸ್) ಲಿಮಿಟೆಡ್ ನ ನಿರ್ದೇಶಕ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.

ಸಿದ್ಧಾರ್ಥ ಮಲ್ಯ ಅವರು ಯುನೈಟೆಡ್ ಬ್ರೇವರೀಸ್ (ಹೋಲ್ಡಿಂಗ್ಸ್) ಲಿಮಿಟೆಡ್(ಯುಬಿಎಚ್ಎಲ್)ನ ನಾನ್ ಎಕ್ಸಿಕ್ಯುಟಿವ್, ನಾನ್ ಇಂಡಿಪೆಂಡೆಂಟ್ ನಿರ್ದೇಶ ಸ್ಥಾನವನ್ನು ಮಾರ್ಚ್ 31ರಿಂದ ಜಾರಿಗೆ ಬರುವಂತೆ ತೆರವುಗೊಳಿಸಿದ್ದಾರೆ ಎಂದು ಯುಬಿಎಚ್ಎಲ್ ಶುಕ್ರವಾರ ಬಾಂಬೆ ಸ್ಟಾಕ್ ಎಕ್ಸಚೆಂಜ್ ಗೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯ್ ಮಲ್ಯ ಅವರು ಟ್ವಿಟರ್ ಮೂಲಕ ನನ್ನ ತಪ್ಪಿಗೆ ನನ್ನ ಮಗನನ್ನು ದೂರಬೇಡಿ ಎಂದು ಹೇಳಿದ ಬೆನ್ನಲ್ಲೇ ಸಿದ್ಧಾರ್ಥ ಮಲ್ಯ ಅವರು ನಿರ್ದೇಶಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

‘ನನ್ನ ಮಗ ಸಿದ್ಧಾರ್ಥನನ್ನು ಈ ವಿವಾದದಲ್ಲಿ ಎಳೆದು ತರಬೇಡಿ. ನನ್ನ ವ್ಯವಹಾರದ ಜೊತೆ ಆತ ಯಾವುದೇ ಸಂಬಂಧ ಹೊಂದಿಲ್ಲ. ಸುಮ್ಮನೆ ಅವನ ವಿರುದ್ಧ ವೃಥಾ ಆರೋಪ ಹೊರಿಸಬೇಡಿ ಎಂದು ವಿಜಯ್ ಮಲ್ಯ ಟ್ವಿಟ್ ಮಾಡಿದ್ದರು.

Write A Comment