ಮುಂಬೈ

ನನ್ನ ಮನೆಗೆ ಯೂಸುಫ್ ಗಿಲಾನಿ ಬಂದಿದ್ದರು: ಹೆಡ್ಲಿ

Pinterest LinkedIn Tumblr

uಮುಂಬೈ (ಪಿಟಿಐ): ‘ನನ್ನ ತಂದೆಯ ನಿಧನದ ಕೆಲ ವಾರಗಳ ನಂತರ ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರು ನನ್ನ ಮನೆಗೆ ಬಂದಿದ್ದರು’ ಎಂದು ಪಾಕಿಸ್ತಾನ ಮೂಲದ ಅಮೆರಿಕ ಉಗ್ರ ಡೇವಿಡ್‌ ಹೆಡ್ಲಿ ಹೇಳಿದ್ದಾನೆ.
ಅಮೆರಿಕದ ಜೈಲಿನಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮುಂಬೈನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ವೇಳೆ ಶುಕ್ರವಾರ ಹೆಡ್ಲಿ ಈ ಹೇಳಿಕೆ ನೀಡಿದ್ದಾನೆ.
‘2008ರ ಡಿಸೆಂಬರ್‌ 26ರಂದು ನನ್ನ ತಂದೆ ನಿಧನರಾದರು. ಅದಾದ ಕೆಲ ವಾರಗಳ ಬಳಿಕ ಗಿಲಾನಿ ಪಾಕಿಸ್ತಾನದಲ್ಲಿರುವ ನನ್ನ ಮನೆಗೆ ಬಂದಿದ್ದರು’ ಎಂದು ಹೆಡ್ಲಿ ತಿಳಿಸಿದ್ದಾನೆ.
ಶಿನಸೇನೆಗಾಗಿ ದೇಣಿಗೆ ಸಂಗ್ರಹ:
ಶಿವಸೇನೆಗಾಗಿ ದೇಣಿಗೆ ಸಂಗ್ರಹಿಸುವ ಕಾರ್ಯಕ್ರಮವನ್ನು ಅಮೆರಿಕದಲ್ಲಿ ಆಯೋಜಿಸಿದ್ದಾಗಿಯೂ ಇದೇ ವೇಳೆ ಹೆಡ್ಲಿ ಹೇಳಿದ್ದಾನೆ. ಆ ಕಾರ್ಯಕ್ರಮಕ್ಕೆ ಶಿವಸೇನೆಯ ಅಂದಿನ ಮುಖ್ಯಸ್ಥ ಬಾಳಾ ಠಾಕ್ರೆ ಅವರನ್ನು ಆಮಂತ್ರಿಸಲು ಯೋಚಿಸಿದ್ದಾಗಿ ಹೆಡ್ಲಿ ತಿಳಿಸಿದ್ದಾನೆ.
‘ಕಾರ್ಯಕ್ರಮಕ್ಕಾಗಿ ಠಾಕ್ರೆ ಅವರನ್ನು ಆಮಂತ್ರಿಸಲು ಯೋಚಿಸಿದ್ದು ನಿಜ. ಆದರೆ, ಅದಕ್ಕಾಗಿ ನಿರ್ದಿಷ್ಟವಾದ ಸಿದ್ಧತೆಯನ್ನೇನೂ ನಡೆಸಿರಲಿಲ್ಲ’ ಎಂದು ಹೆಡ್ಲಿ ಹೇಳಿದ್ದಾನೆ.

Write A Comment