ಮುಂಬೈ

ವಿಚಾರಣೆ ವೇಳೆ ಹೆಡ್ಲಿ ಬಾಯ್ಬಿಟ್ಟ 4 ಸತ್ಯಗಳು

Pinterest LinkedIn Tumblr

headley-e1458822833124ಮುಂಬೈ: 26/11 ರ ಮುಂಬೈ ಭಯೋತ್ಪಾದಕ ದಾಳಿ ಕಾರ್ಯಾಚರಣೆಗೆ ಪಾಕಿಸ್ತಾನದ ಐಎಸ್ಐಯಿಂದ ತನಗೆ ಭಾರೀ ಪ್ರಮಾಣದ ಹಣ ಸಂದಾಯವಾಗಿತ್ತು ಎಂದು ಡೇವಿಡ್ ಹೆಡ್ಲಿ ಬಾಯಿಬಿಟ್ಟಿದ್ದಾನೆ.

ಅಮೆರಿಕದ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹೆಡ್ಲಿ ವಿಚಾರಣೆ ಗುರುವಾರ ನಡೆದಿದ್ದು, ವಿಚಾರಣೆ ನಂತರ ಮಾಧ್ಯಮದವರ ಮುಂದೆ ಮಾತನಾಡಿದ ಕೇಸಿನ ವಿಶೇಷ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್, ಡೇವಿಡ್ ಹೆಡ್ಲಿ 4 ಸತ್ಯಗಳನ್ನು ಬಿಚ್ಚಿಟ್ಟಿದ್ದಾನೆ ಎಂದರು.

1) 26/11ರ ಮುಂಬೈ ದಾಳಿಯ ಸಂಪೂರ್ಣ ಕಾರ್ಯಾಚರಣೆಗೆ ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ಐಎಸ್ಐಯಿಂದ ಭಾರೀ ಹಣ ಸಂದಾಯವಾಗಿದೆ.

2) ಲಷ್ಕರ್ ಇ ತಯ್ಯಬಾ ಸಂಘಟನೆ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅವರನ್ನು ಕೊಲ್ಲಲು ಯತ್ನ ನಡೆಸಿತ್ತು ಎಂದು ಹೆಡ್ಲಿ ಹೇಳಿದ್ದಾನೆ.

3) ಮುಂಬೈ ದಾಳಿ ನಂತರ ಎಲ್ ಇಟಿ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಒತ್ತಡ ಬಂದಿತ್ತು. ಹಾಗಾಗಿ ಡೆನ್ಮಾರ್ಕ್ ದಾಳಿ ಬಗ್ಗೆ ಎಲ್ ಇಟಿ ಮೃದು ಧೋರಣೆ ತಳೆಯಿತು ಎಂದಿದ್ದಾನೆ. ಬಳಿಕ ತನ್ನ ಪತ್ನಿಯ ಬಗ್ಗೆ ಕೇಳಿದಾಗ ಆಕೆ ಈಗಲೂ ನನ್ನ ಧರ್ಮಪತ್ನಿ ಆದರೆ ಅವಳು ಎಲ್ಲಿದ್ದಾಳೆ ಎಂಬುದನ್ನು ನಾನು ಹೇಳುವುದಿಲ್ಲ ಎಂದಿದ್ದಾನೆ.

4) ಎಲ್ ಇಟಿ ಕಾರ್ಯಾಚರಣೆಯಿಂದ ಗುಜರಾತ್ ನಲ್ಲಿ ನಕಲಿ ಎನ್ ಕೌಂಟರ್ ನಲ್ಲಿ ಇಶ್ರತ್ ಜಹಾನ್ ಕೊಲೆಯಾದಳು ಎಂದು ತಿಳಿಸಿದ್ದಾನೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಹೆಡ್ಲಿ ವಿಚಾರಣೆ ನಾಳೆಯೂ ಮುಂದುವರೆಯಲಿದೆ ಎಂಬುವುದಾಗಿ ತಿಳಿದುಬಂದಿದೆ.

Write A Comment