ಮುಂಬೈ

ವಿಮಾನದಲ್ಲಿ ತ್ರಿಶೂಲ ತೆಗೆದುಕೊಂಡು ಹೋಗಿದ್ದ ರಾಧೇ ಮಾ ವಿರುದ್ಧ ಕೇಸ್ ದಾಖಲು

Pinterest LinkedIn Tumblr

radhe-maa-l

ಮುಂಬೈ: ತ್ರಿಶೂಲ ಹಿಡಿದು ವಿಮಾನದಲ್ಲಿ ಪ್ರಯಾಣಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವ ಮಹಿಳೆ ರಾಧೇ ಮಾ ವಿರುದ್ದ ಎಫ್ಐಆರ್ ದಾಖಲಿಸುವಂತೆ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪೊಲೀಸರಿಗೆ ಆದೇಶಿಸಿದೆ.

2015ರಲ್ಲಿ ಔರಾಂಗಾಬಾದ್ ನಿಂದ ಮುಂಬೈ ಗೆ ತೆರಳುತ್ತಿದ್ದ ಜೆಟ್ ಏರ್ವೇಸ್ ನಲ್ಲಿ ರಾಧೇ ಮಾ ತ್ರಿಶೂಲ ಹಿಡಿದು ಪ್ರಯಾಣಿಸಿದ್ದರು. ಈ ಸಂಬಂಧ ಆರ್ಟಿಐ ಕಾರ್ಯಕರ್ತ ಅಸಾದ್ ಪಟೇಲ್ ದೂರು ನೀಡಿದ್ದು. ಈ ಸಂಬಂಧ ಮೆಟ್ರೋಪಾಲಿಟನ್ ಮ್ಯಾಜಿಸ್ಟೇಟ್ ಕೋರ್ಟ್ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶ ನೀಡಿದೆ.

ವಿಮಾನದಲ್ಲಿ ಪ್ರಯಾಣಿಸುವ ವೇಳೆ ಸುರಕ್ಷತಾ ದೃಷ್ಠಿಯಿಂದ ಚೂಪಾದ ಆಯುಧಗಳನ್ನು ಕೊಂಡೊಯ್ಯುವಂತಿಲ್ಲ. ಆದರೆ ರಾಧೇ ಮಾ ತ್ರಿಶೂಲ ವಿಡಿದು ವಿಮಾನ ಪ್ರಯಾಣ ಮಾಡಿದ್ದರು. ಈ ಕುರಿತು ಅಂದು ಸಹ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿ ವಿಮಾನ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದರು.

Write A Comment