ಮನೋರಂಜನೆ

ಪತಿ ಸಂಜಯ್ ಕಪೂರ್ ವಿರುದ್ದ ವರದಕ್ಷಿಣೆ ಕೇಸು ದಾಖಲಿಸಿದ ಕರೀಷ್ಮಾ

Pinterest LinkedIn Tumblr

karisma-sanjay

ಮುಂಬೈ: ಬಾಲಿವುಡ್ ನಟಿ ಕರೀಷ್ಮಾ ಕಪೂರ್ ತಮ್ಮ ಪರಿತ್ಯಕ್ತ ಪತಿ ಸಂಜಯರ್ ಕಪೂರ್ ವಿರುದ್ಧ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ದೂರು ದಾಖಲಿಸಿದ್ದಾರೆ.

ಮುಂಬಯಿಯ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಕರೀಷ್ಮಾ ಕಪೂರ್, ತನ್ನ ಪತಿ ಸಂಜಯ್ ಕಪೂರ್ ಹಾಗೂ ಆತನ ತಾಯಿ ರಾಣಿ ತಮಗೆ ವರದಕ್ಷಿಣೆಗಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೂ ಕರೀಷ್ಮಾ ನೀಡಿರುವ ದೂರಿನ ಅನ್ವಯ ಮುಂಬಯಿ ನ ಖಾರ್ ಠಾಣೆ ಪೊಲೀಸರು ಸಂಜಯ್ ಕಪೂರ್ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಇನ್ನು ಈ ಇಬ್ಬರು ವಿಚ್ಥೇದನಕ್ಕಾಗಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು ಮಕ್ಕಳ ನಿರ್ವಹಣೆ ಹೊಣೆಯನ್ನು ಯಾರು ತೆಗದುಕೊಳ್ಳಬೇಕು ಎಂಬುದರ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ.

Write A Comment