ಮನೋರಂಜನೆ

‘ನೀರ್ಜಾ’ಗೆ ದೆಹಲಿ, ಉತ್ತರ ಪ್ರದೇಶದಲ್ಲೂ ತೆರಿಗೆ ವಿನಾಯ್ತಿ

Pinterest LinkedIn Tumblr

Neerja

ನವದೆಹಲಿ: ಮಹಾರಾಷ್ಟ್ರ, ಗುಜರಾತ್ ನಲ್ಲಿ ನೀರ್ಜಾ ಸಿನಿಮಾಗೆ ತೆರಿಗೆ ವಿನಾಯ್ತಿ ನೀಡಿದ ಬೆನ್ನಲ್ಲೇ ದೆಹಲಿ, ಉತ್ತರ ಪ್ರದೇಶದಲ್ಲೂ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ.

ನೀರ್ಜಾ ಚಿತ್ರದ ನಟಿ ಸೋನಮ್‌ ಕಪೂರ್‌ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ನೀರ್ಜಾ ಸಿನಿಮಾ ಈಗ ಉತ್ತರ ಪ್ರದೇಶ, ದೆಹಲಿಯಲ್ಲೂ ತೆರಿಗೆ ವಿನಾಯ್ತಿ ಪಡೆದಿದೆ ಎಂದು ಟ್ವೀಟ್ ಮಾಡಿದ್ದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಧನ್ಯವಾದ ತಿಳಿಸಿದ್ದಾರೆ.

ನೀರ್ಜಾದಂತಹ ಚಿತ್ರಕಥೆ ಹೊಂದಿರುವ ಸಿನಿಮಾಗಳನ್ನು ತೆರಿಗೆ ಮುಕ್ತವಾಗಿಸಿದರೆ ಅತಿ ಹೆಚ್ಚು ಜನರಿಗೆ ತಲುಪಲಿದೆ ಎಂದು ಚಿತ್ರದ ನಿರ್ದೇಶಕ ರಾಮ್ ಮಾಧ್ವಾನಿ ಅಭಿಪ್ರಾಯಪಟ್ಟಿದ್ದರು. 1986 ರ ಸೆ.5 ರಂದು ಪ್ಯಾನ್ ಆಮ್ ವಿಮಾನದಲ್ಲಿ ಭಯೋತ್ಪಾದಕರನ್ನು ಎದುರಿಸಿ ಪ್ರಯಾಣಿಕರನ್ನು ಬದುಕಿಸಿದ್ದ ನೈಜ ಘಟನೆ ಆಧಾರಿತ ನೀರ್ಜಾ ಸಿನಿಮಾ ಫೆ.19 ರಂದು ಬಿಡುಗಡೆಯಾಗಿತ್ತು.

Write A Comment