ಮುಂಬೈ: 2013ರಲ್ಲಿ ಇಂಡಿಯನ್ ಪ್ರೀಮಿಯಮ್ ಲೀಗ್ನಲ್ಲಿ ನಡೆದಿದೆ ಎನ್ನಲಾದ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಪಾಕಿಸ್ತಾನ ಮೂಲದ ಅಂಪೈರ್ ಅಸದ್ ರೌಫ್ಗೆ ಭ್ರಷ್ಟಾಚಾರ ಮತ್ತು ಅಶಿಸ್ತಿನ ನಡವಳಿಕೆಗಾಗಿ ಬಿಸಿಸಿಐ ಐದು ವರ್ಷಗಳ ನಿಷೇದ ಹೇರಿದೆ.
ಈ ಐದು ವರ್ಷದ ಅವಧಿಯಲ್ಲಿ ಬಿಸಿಸಿಸಿಐ ಹಾಗೂ ಅದರ ಅಂಗಸಂಸ್ಥೆಗಳು ಆಯೋಜಿಸುವ ಯಾವುದೇ ಪಂದ್ಯದಲ್ಲಿ ಅಸದ್ ರೌಫ್ ಅಂಪೈರಿಂಗ್ ಮಾಡುವಂತಿಲ್ಲ ಹಾಗೂ ಯಾವುದೇ ರೀತಿಯ ಕ್ರಿಕೆಟ್ ಚಟುವಟಿಕೆಯಲ್ಲಿಯೂ ಪಾಲ್ಗೊಳ್ಳುವಂತಿಲ್ಲ ಎಂದು ಶಿಸ್ತು ಸಮಿತಿ ತಿಳಿಸಿದೆ.
2013ರ ಐಪಿಎಲ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡುತ್ತಿದ್ದ ಅಸದ್ ರೌಫ್ ಬುಕ್ಕಿಗಳೊಂದಿಗೆ ಸಂಪರ್ಕಹೊಂದಿದ್ದು, ಸ್ಪಾಟ್ ಫಿಕ್ಸಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.