ಮುಂಬೈ

ಹಿಟ್ ಆ್ಯಂಡ್ ರನ್ ಕೇಸ್‌ಗೆ 25 ಕೋಟಿ ರೂ ಖರ್ಚು

Pinterest LinkedIn Tumblr

hit_1ffಮುಂಬೈ, ಡಿ.14: ಹಿಟ್ ಆ್ಯಂಡ್ ರನ್ ಕೇಸ್ ಹೋರಾಟಕ್ಕೆ ಬಾಲಿವುಡ್ ತಾರೆ ಸಲ್ಮಾನ್ ಖಾನ್ 25 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಅವರ ತಂದೆ ಸಲೀಮ್ ಖಾನ್ ತಿಳಿಸಿದ್ದಾರೆ.

ಇಷ್ಟೊಂದು ಭಾರಿ ಮೊತ್ತದ ಹಣ ಈ ಪ್ರಕರಣದಲ್ಲಿ ಖರ್ಚು ಮಾಡಿದ್ದರೂ, ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಸಂತಸವಾಗಿದೆ ಎಂದು ಅವರು ಹೇಳಿದ್ದಾರೆ.

ಬಾಲಿವುಡ್‌  ನಟ ಸಲ್ಮಾನ್‌ ಖಾನ್‌ ಅವರು 2002ರಲ್ಲಿ ಅಪಘಾತ ನಡೆಸಿ ಪರಾರಿಯಾಗಿರುವ ಪ್ರಕರಣದ ತೀರ್ಪನ್ನು ಬಾಂಬೆ ಹೈಕೋರ್ಟ್‌ ಗುರುವಾರ ಪ್ರಕಟಿಸಿದ್ದು , ಸಲ್ಮಾನ್‌ ಖಾನ್‌ ಅವರನ್ನು ಖುಲಾಸೆಗೊಳಿಸಿತ್ತು..

Write A Comment