ಮುಂಬೈ

ಆಂಬುಲೆನ್ಸ್‌ನಲ್ಲೇ ಸುಟ್ಟು ಕರಕಲಾದ ನವಜಾತ ಶಿಶು

Pinterest LinkedIn Tumblr

amಮುಂಬೈ, ಡಿ.11-ಅಸ್ವಸ್ಥಗೊಂಡಿದ್ದ ನವಜಾತ ಶಿಶುವನ್ನು ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಸಾಗಿಸುವಾಗಿ ವಾಹನಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ  ಥಾಣೆ ಬಳಿ ನಡೆದಿದೆ.

ನಿನ್ನೆಯಷ್ಟೇ ಜನಿಸಿದ ಹೆಣ್ಣು ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಬೈನ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಇಂದು ಬೆಳಗ್ಗೆ ಆಂಬುಲೆನ್ಸ್‌ನಲ್ಲಿ ವೈದ್ಯರು ಹಾಗೂ ನರ್ಸ್ ಮುಂದಾದರು. ಆಂಬುಲೆನ್ಸ್‌ನ ಚಾಲಕನ ಪಕ್ಕದಲ್ಲಿಯೇ ಇವರಿಬ್ಬರು ಕೂತು, ಹಿಂಬದಿ ಇನ್‌ಕ್ಯೂಬೇಟರ್ ಕಿಟ್‌ನಲ್ಲಿ ಮಗುವನ್ನು ಇಟ್ಟು ಪ್ರಯಾಣ ಆರಂಭಿಸಿದರು. ಇನ್ನೇನು ಮುಂಬೈ ಬಂತು ಎನ್ನುವಷ್ಟರಲ್ಲೇ  ವಾಹನದಲ್ಲಿದ್ದ ಸಿಎನ್‌ಜಿ ಕಿಟ್‌ನಲ್ಲಿ ಬೆಂಕಿ ಕಿಡಿ ಕಾಣಿಸಿಕೊಂಡಿತು.

ವಾಹನಕ್ಕೆ ಬೆಂಕಿ ತಗುಲಿದ್ದನ್ನು ಕಂಡ ಎಲ್ಲರೂ ಕೆಳಗಿಳಿದು ಆಚೆ ಬರುತ್ತಿದ್ದಂತೆ ಆಮ್ಲಜನಕ ತುಂಬಿದ್ದ ಸಿಲೆಂಡರ್ ಸ್ಫೋಟಗೊಂಡು ಇಡೀ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿತು. ಮಗು ಜೀವಂತವಾಗಿ ಸುಟ್ಟು ಕರಕಲಾಗಿದೆ ಎಂದು ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ ಸಂತೋಷ್ ಕದಂ ಅವರು ತಿಳಿಸಿದ್ದಾರೆ.

Write A Comment