ಮುಂಬೈ

ಶಿರಡಿ ಸಾಯಿಬಾಬಾ ಮೂರ್ತಿ ಕೈಯಿಂದ ಹೊರಬಂತು ನೀರು !

Pinterest LinkedIn Tumblr

sai-baba1

ಮುಂಬೈ: ಅಪಾರ ಸಂಖ್ಯೆಯ ಭಕ್ತಾದಿಗಳನ್ನು ಹೊಂದಿರುವ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಇದೀಗ ಪವಾಡವೊಂದು ನಡೆದಿದ್ದು, ಬಾಬಾ ಮೂರ್ತಿಯ ಕೈಯಿಂದ ನೀರು ಬರುತ್ತಿರುವುದಾಗಿ ಹೇಳಲಾಗುತ್ತಿದೆ.

ಶಿರಡಿಯ ಭೋಜನ ಗೃಹದಲ್ಲಿ ಇಟ್ಟಿರುವ ಮೂರ್ತಿಯ ಕೈಯಿಂದ ನೀರು ಚಿಮ್ಮುತ್ತಿದ್ದು, ಶಿರಡಿಯಲ್ಲಿ ಪವಾಡವೊಂದು ನಡೆಯುತ್ತಿರುವುದಾಗಿ ಹೇಳಲಾಗುತ್ತಿದೆ.

ಎಂದಿನಂತೆ ಮಂಗಳವಾರ ಭಕ್ತಾದಿಗಳಿಗಾಗಿ ಅಲ್ಲಿನ ಬಾಣಸಿಗರು ಅಡುಗೆ ಮಾಡಲು ಹೋಗಿದ್ದಾರೆ. ಈ ವೇಳೆ ಅಡುಗೆ ಕೋಣೆಯಲ್ಲಿದ್ದ ಬಾಬಾ ಮೂರ್ತಿಯ ಕೈಯಲ್ಲಿ ನೀರು ಚಿಮ್ಮುತ್ತಿರುವ ದೃಶ್ಯ ಕಂಡುಬಂದಿದೆಯಂತೆ. ಮೂರ್ತಿಯ ಕೈಯಲ್ಲಿ ಸುಮಾರು 30 ನಿಮಿಷಗಳ ಕಾಲ ನೀರು ಬಂದಿದೆಯಂತೆ.

ಇದನ್ನು ಕಂಡ ಅಲ್ಲಿನ ಜನರು ತಮ್ಮ ಮೊಬೈಲ್ ನಲ್ಲಿ ವೀಡಿಯೋಗಳನ್ನು ಮಾಡಿಕೊಂಡಿದ್ದು, ಈ ವಿಡಿಯೋಗಳು ವಾಟ್ಸ್ ಅಪ್ ಗಳಲ್ಲಿ ಹರಿದಾಡುತ್ತಿದೆಯಂತೆ.

ವಾಟ್ಸ್ ಅಪ್ ನಲ್ಲಿ ಬಂದ ಸುದ್ದಿ ಹಾಗೂ ವಿಡಿಯೋಗಳನ್ನು ನೋಡಿರುವ ಸಾಕಷ್ಟು ಮಂದಿ ಮೂರ್ತಿ ನೋಡಲೆಂದು ಶಿರಡಿಗೆ ಹೋಗುತ್ತಿದ್ದಾರೆಂದು ತಿಳಿದುಬಂದಿದೆ.

Write A Comment