
ಮುಂಬೈ: ಕರ್ನಾಟಕದ ಪ್ರಮುಖ ರಾಜಕಾರಣಿಗಳು ಮತ್ತು ಪತ್ರಕರ್ತರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಲಷ್ಕರ್ ಉಗ್ರನನ್ನು ಎನ್ ಐಎ ಬಂಧಿಸಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಲಷ್ಕರ್ ಉಗ್ರ ಅಸಾದುಲ್ಲಾ ಖಾನ್ ಎಂಬಾತನನ್ನು ಹೈದರಾಬಾದ್ನ ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಹೈದರಾಬಾದ್ ನಿಂದ ಸೌದಿ ಅರೇಬಿಯಾಗೆ ತೆರಳುತ್ತಿದ್ದ ವೇಳೆ ಎನ್ ಐ ಎ ತಂಡ ಉಗ್ರನನ್ನು ಬಂಧಿಸಿದೆ,
57 ವರ್ಷ ವಯಸ್ಸಿನ ಹೈದರಾಬಾದ್ ಮೂಲದ ಅಸಾದುಲ್ಲಾ ಖಾನ್ನನ್ನು ಬೆಂಗಳೂರಿಗೆ ಕರೆತರಲಾಗುತ್ತಿದ್ದು, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ.