ಮುಂಬೈ

ಯುವತಿಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ ನಟ ಯಶ್ ಪಂಡಿತ್

Pinterest LinkedIn Tumblr

3yash

ಮುಂಬೈ: 28 ವರ್ಷ ವಯಸ್ಸಿನ ಯುವತಿಗೆ ವಿವಾಹವಾಗುವ ಭರವಸೆ ನೀಡಿ ಹಲವಾರು ಬಾರಿ ಅತ್ಯಾಚಾರವೆಸಗಿದ ನಟ ಯಶ್ ಪಂಡಿತ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.

ಟೆಲಿವಿಜನ್ ಚಾನೆಲ್‌ಗಳಲ್ಲಿ ಜನಪ್ರಿಯ ನಟನಾದ ಪಂಡಿತ್, ಜೂಹುನಲ್ಲಿರುವ ತಮ್ಮ ನಿವಾಸದಲ್ಲಿ ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಳೆದ ಸೆಪ್ಟೆಂಬರ್ 13 ರಂದು ಎರಡು ಬಾರಿ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದ ಪಂಡಿತ್, ಅಂದು ನನ್ನೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಕೆಲ ದಿನಗಳ ನಂತರ ನನ್ನನ್ನು ನಿರ್ಲಕ್ಷಿಸಲು ಆರಂಭಿಸಿದ್ದ. ನನ್ನೊಂದಿಗೆ ಕೇವಲ ದೈಹಿಕ ಸಂಬಂಧ ಮುಂದುವರಿಸಲು ಮಾತ್ರ ಬಯಸಿದ್ದ. ಅನೇಕ ಯುವತಿಯರೊಂದಿಗೆ ಸೆಕ್ಸ್ ಸಂಬಂಧ ಬೆಳೆಸಿದ್ದೇನೆ ಎಂದು ನನ್ನ ಮುಂದೆ ಒಪ್ಪಿಕೊಂಡಿದ್ದ. ಆದರೆ, ಯುವತಿಯರು ಗೌರವದ ಪ್ರಶ್ನೆಯಿಂದಾಗಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ, ನಾನು ಆತನ ಗುಣಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಪಾಠ ಕಲಿಸಬೇಕು ಎಂದು ನಿರ್ಧರಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಯುವತಿ ತಿಳಿಸಿದ್ದಾಳೆ.

ಯಶ್ ಪಂಡಿತ್ ಕುಟುಂಬ ಪ್ರಭಾವಿಯಾಗಿದ್ದರಿಂದ ಪೊಲೀಸರ ಮೇಲೆ ಆರೋಪಿಯನ್ನು ಬಂಧಿಸದಿರಲು ಒತ್ತಡವಿರಬಹುದು. ಆದ್ದರಿಂದ ಇಲ್ಲಿಯವರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ ಎಂದು ಯುವತಿ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.

ಜೂಹು ಪೊಲೀಸ್ ಠಾಣೆಯ ಅಧಿಕಾರಿ ಸುನೀಲ್ ಘೋಸಾಲ್ಕರ್ ಮಾತನಾಡಿ, ಆರೋಪಿ ಪಂಡಿತ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು, ಆತನು ಅಡಗಿರುವ ಸ್ಥಳಗಳ ಪತ್ತೆಗಾಗಿ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

Write A Comment