ಮುಂಬೈ

ಶೀನಾ ಬೋರಾ ಜೊತೆ ನನಗೆ ನಿಶ್ಚಿತಾರ್ಥವಾಗಿತ್ತು: ಪೀಟರ್ ಮುಖರ್ಜಿ ಪುತ್ರ

Pinterest LinkedIn Tumblr

sheena-boraಮುಂಬಯಿ: ಶೀನಾ ಬೋರಾ ಕೊಲೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಶೀನಾ ಬೋರಾ ಜೊತೆ ನನಗೆ ಅಫೈರ್ ಇತ್ತು ಎಂದು ಹೇಳುವ ಮೂಲಕ ಪೀಟರ್ ಮುಖರ್ಜಿ ಪುತ್ರ ರಾಹುಲ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ.

ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಮುಖರ್ಜಿಯನ್ನು ಸಿಬಿಐ ವಿಶೇಷ ತಂಡ ಸುಮಾರು 12 ಗಂಟೆಗಳ ಕಾಲ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ರಾಹುಲ್ ಹಲವು ವಿಷಯಗಳನ್ನು ತಿಳಿಸಿದ್ದಾರೆ.

2001 ನವೆಂಬರ್ ನಲ್ಲಿ ಡೆಹಾರಾಡೂನ್ ನಲ್ಲಿ  ಆಕೆ ಜೊತೆಗೆ ನನ್ನ ನಿಶ್ಚಿತಾರ್ಥ ಆಗಿತ್ತು. 2008 ರಲ್ಲಿ ತಾನು ಇಂದ್ರಾಣಿ ಮುಖರ್ಜಿ ಮಗಳು ಎಂದು ಹೇಳಿಕೊಂಡಿದ್ದಳು. ಆಕೆಯ ಜೊತೆಗೆ ನನಗೆ ಸಂಬಂಧವಿತ್ತು ಎಂದು ರಾಹುಲ್ ಮುಖರ್ಜಿ ಹೇಳಿದ್ದಾನೆ.

ಏಪ್ರಿಲ್ 24 ರಂದು ಇಂದ್ರಾಣಿ ಮುಖರ್ಜಿ ಶೀನಾ ಳನ್ನು ಭೇಟಿ ಮಾಡುವಂತೆ ಕರೆದಿದ್ದಳು. ನಾನು ಶೀನಾಳನ್ನು ಇಂದ್ರಾಣಿ ಮುಖರ್ಜಿ ಕಾರ್ ಇದ್ದ ಸ್ಥಳಕ್ಕೆ ಡ್ರಾಪ್ ಮಾಡಿದ್ದೆ.  ಆ ವೇಳೆ ಇಂದ್ರಾಣಿ ಕಾರಿನ ಚಾಲಕ ಶ್ಯಾಮ್ ರೈ ಕೂಡ ಇದ್ದ. ತಾನು ಈ ರಾತ್ರಿ ಇಂದ್ರಾಣಿ ಜೊತೆಯೇ ಇರಬೇಕು ಎಂದು ಶೀನಾ ತನಗೆ ಮೆಸೇಜ್ ಮಾಡಿದ್ದಳು ಎಂದು ರಾಹುಲ್ ಸಿಬಿಐ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ.

Write A Comment