ಮುಂಬೈ

ಜನತೆಯನ್ನು ಒಂದು ಬಾರಿ ಮೂರ್ಖರನ್ನಾಗಿಸಬಹುದು, ಪ್ರತಿ ಬಾರಿಯಲ್ಲ: ಮೋದಿಗೆ ಶಿವಸೇನೆ ಟಾಂಗ್

Pinterest LinkedIn Tumblr

huliಮುಂಬೈ: ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ, ಪ್ರತಿ ಚುನಾವಣೆಯಲ್ಲಿ ಹಣ ಕೆಲಸ ಮಾಡುವುದಿಲ್ಲ ಎಂದು ಕಿಡಿಕಾರಿದೆ.

ಜನತೆಯನ್ನು ಒಂದು ಬಾರಿ ಮಾತ್ರ ಮೂರ್ಖರನ್ನಾಗಿಸಬಹುದೇ ಹೊರತು ಪ್ರತಿ ಬಾರಿ ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಶಿವಸೇನೆ ಪರೋಕ್ಷವಾಗಿ ಟಾಂಗ್ ನೀಡಿದೆ.

ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್‌ ಗೆಲುವಿನಲ್ಲಿ ಹಲವು ಕಾರಣಗಳಿದ್ದು, ಪಾರದರ್ಶಕ ಪ್ರಚಾರ ಮತ್ತು ಅವರ ಪ್ರಾಮಾಣಿಕತೆ ಪ್ರಮುಖವಾಗಿದೆ ಎಂದು ಹೊಗಳಿದೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಲಘುವಾಗಿ ಪರಿಗಣಿಸಿ ಹೀನಾಯ ಸೋಲು ಕಂಡಿದ್ದ ಬಿಜೆಪಿ, ನಿತೀಶ್ ಮತ್ತು ಮೋದಿ ಮಧ್ಯೆ ನೇರ ಹಣಾಹಣಿಯಿದ್ದರಿಂದ ಬಿಹಾರ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿತ್ತು. ಹಲವಾರು ಯೋಜನೆಗಳು, ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಿದ್ದರೂ ಬಿಜೆಪಿ 60 ಸೀಟುಗಳನ್ನು ಗೆಲ್ಲಲು ಸಾಧ್ಯವಾಗದಿರುವುದು ವಿಷಾದನೀಯ ಎಂದಿದೆ.

ನಿತೀಶ್ ನೇತೃತ್ವದ ಮಹಾಮೈತ್ರಿಕೂಟದ ಗೆಲುವಿನ ಮತ್ತೊಂದು ಕಾರಣವೆಂದರೆ, ಸುಳ್ಳು ಹೇಳದಿರುವುದು ಮತ್ತು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಯೋಜನೆಗಳಿಗೆ ಚಾಲನೆ ನೀಡಿರುವುದು ಮಹತ್ವದ ಅಂಶಗಳಾಗಿವೆ ಎಂದು ಹೇಳಿದೆ.

ನಿತೀಶ್ ಕುಮಾರ್ ಜನತೆಗೆ ಸುಳ್ಳು ಭರವಸೆಗಳನ್ನು ನೀಡಲಿಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜಾರಿಗೆ ತಂದರು. ಚುನಾವಣೆ ಪ್ರಚಾರದಲ್ಲೂ ಹಣ ಮತ್ತು ಅಧಿಕಾರದ ದಾಹದ ದುರಹಂಕಾರದಿಂದ ಮೆರೆಯಲಿಲ್ಲ. ಚುನಾವಣೆ ಭಾಷಣಗಳಲ್ಲಿ ಅನಾಗರಿಕ ಪದಗಳನ್ನು ಬಳಸಲಿಲ್ಲ. ಸರಳವಾಗಿ ಪ್ರಚಾರದಲ್ಲಿ ತೊಡಗಿದ್ದರಿಂದ ಗೆಲುವು ಅವರದಾಯಿತು ಎಂದು ಅಭಿಪ್ರಾಯಪಟ್ಟಿದೆ.

Write A Comment