ಅಂತರಾಷ್ಟ್ರೀಯ

ಪಾಕಿಸ್ತಾನ ಕಲಾವಿದರನ್ನು ಭಾರತಕ್ಕೆ ಕಾಲಿಡಲು ಬಿಡುವುದಿಲ್ಲ: ಶಿವಸೇನೆ ಎಚ್ಚರಿಕೆ

Pinterest LinkedIn Tumblr

Shiv_Sena

ಪಾಕಿಸ್ತಾನದ ನಟಿಯರನ್ನು ಬಾಲಿವುಡ್ ಕರೆಸಿಕೊಳ್ಳುವುದು ಅವಮಾನ, ಪಾಕಿಸ್ತಾನ ಮೂಲದ ಕಲಾವಿದರು ಭಾರತಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಶಿವಸೇನೆ ಎಚ್ಚರಿಕೆ ನೀಡಿದೆ.

ಪಾಕಿಸ್ತಾನ ಮೂಲದ ಕಲಾವಿದರು, ನಟ, ನಟಿಯರು, ಕ್ರಿಕೆಟರ್ಸ್ ಮುಂಬೈ ನೆಲಕ್ಕೆ ಕಾಲಿಡಬಾರದು, ಶಾರುಖ್ ಖಾನ್ ಚಿತ್ರವಿರಲಿ, ಯಾರದ್ದೇ ಆಯೋಜನೆಯಿರಲಿ, ನಾವು ಬಗ್ಗುವುದಿಲ್ಲ ಎಂದು ಶಿವಸೇನೆಯ ಹುಲಿಗಳು ಘರ್ಜಿಸಿದ್ದಾರೆ.

ಪಾಕಿಸ್ತಾನ ಘಜಲ್ ಗಾಯಕ ಗುಲಾಂ ಅಲಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ್ದ ಶಿವಸೇನಾ ಕಾರ್ಯಕರ್ತರು ಇತ್ತೀಚೆಗೆ ಬಿಸಿಸಿಐ ಕಚೇರಿಗೆ ದಾಳಿ ಮಾಡಿದ್ದರು. ಭಾರತ ಹಾಗೂ ಪಾಕಿಸ್ತಾನ ನಡುವೆ ಕ್ರಿಕೆಟ್ ಟೂರ್ನಿ ಆಯೋಜನೆಗೆ ಮುಂದಾಗದಂತೆ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಗೆ ಎಚ್ಚರಿಕೆ ನೀಡಿದ್ದರು. ನಂತರ ಪ್ರಸ್ತುತ ಭಾರತ ಹಾಗೂ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಾಕಿಸ್ತಾನ ಅಂಪೈರ್ ಅಲೀಂ ದಾರ್ ರನ್ನು ಕೂಡಾ ಉಳಿದ ಪಂದ್ಯಗಳಿಂದ ಕೈಬಿಡಲಾಯಿತು.

ಶಿವಸೇನಾ ಚಿತ್ರಪಟ್ ಸೇನಾ ವಿಭಾಗದ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಬರ್ದಾಪುರ್ಕರ್ ಅವರು ಮಾತನಾಡಿ, ಪಾಕಿಸ್ತಾನ ಕ್ರಿಕೆಟರ್ಸ್ ಹಾಗೂ ನಟಿಯರು ಮಹಾರಾಷ್ಟ್ರದ ನೆಲಕ್ಕೆ ಕಾಲಿಡಂತೆ ಮಾಡುತ್ತೇವೆ ಎಂದಿದ್ದಾರೆ. ಶಾರುಖ್ ಖಾನ್ ಅಭಿನಯದ ‘ರಾಯೀಸ್’ ಚಿತ್ರದಲ್ಲಿ ಪಾಕಿಸ್ತಾನ ಮಾಹೀರಾ ಖಾನ್ ನಟಿಸುತ್ತಿದ್ದಾರೆ. ಫಹದ್ ಖಾನ್ ಅವರು ‘ಏ ದಿಲ್ ಹೈ ಮುಶ್ಕಿಲ್’ ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ಪ್ರಚಾರ, ಪ್ರದರ್ಶನ ಮಹಾರಾಷ್ಟ್ರದ ನೆಲದಲ್ಲಿ ಸಾಧ್ಯವಿಲ್ಲ ಎಂದು ಅಕ್ಷಯ್ ಹೇಳಿದ್ದಾರೆ.

Write A Comment