ಅಮೃತಸರ: ಸಿಕ್ಖರ ಪವಿತ್ರ ಗುರು ಗ್ರಂಥ ಸಾಹಿಬ್ ಅಪವಿತ್ರಗೊಳಿಸಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ಫರೀದ್‌ಕೋಟ್ ಜಿಲ್ಲೆಯ ಬರ್ಗಾರಿ ಗ್ರಾಮದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರೂಪೀಂದರ್ ಸಿಂಗ್ ಮತ್ತು ಆತನ ಸಹೋದರ ಜಸ್ವೀಂದರ್ ಎಂದು ಗುರುತಿಸಲಾಗಿದೆ.
ಸಿಕ್ಖರ ಧಾರ್ಮಿಕ ಗ್ರಂಥವನ್ನು ಅಪವಿತ್ರಗೊಳಿಸಿರುವ ವಿಷಯ ಇವರ ಫೋನ್ ಸಂಭಾಷಣೆಯನ್ನು ಕದ್ದಾಲಿಕೆ ಬಳಿಕ ವಿಷಯ ತಿಳಿಯಿತು ಎಂದು ಪಂಜಾಬಿನ ಹೆಚ್ಚುವರಿ ಜಿಜಿಪಿ, ಐಪಿಎಸ್ ಸಹೋತಾ ತಿಳಿಸಿದ್ದಾರೆ.
ಈ ಆರೋಪಿಗಳ ಫೋನ್ ಕರೆಗಳು ದುಬೈ ಮತ್ತು ಆಸ್ಟ್ರೇಲಿಯದೊಂದಿಗೆ ನಂಟು ಹೊಂದಿರುವುದು ಗೊತ್ತಾಗಿದೆ. ಮಾತ್ರವಲ್ಲದೆ ಈ ಆರೋಪಿಗಳು ಫೋನ್ ಸಂಭಾಷಣೆಯ ಮೂಲಕ ಗ್ರಂಥವನ್ನು ಅಪವಿತ್ರಗೊಳಿಸದ ಕೆಲಸವನ್ನು ಖುದ್ದು ಇವರೇ ಮಾಡಿರುವುದು ಖಾತರಿಯಾಗಿದೆ.
ಅಮೃತ್‌ಸರ, ಲೂಧಿಯಾನಾ, ಜಾಲಂಧರ ಮತ್ತು ತರಣ್ ತಾರಣ್‌ನಲ್ಲಿ ಹೆಚ್ಚಿನ ಭದ್ರತೆಗಾಗಿ ಕೇಂದ್ರೀಯ ಪಡೆಗಳನ್ನು ನಿಯೋಜಿಸಲಾಗಿದೆ. ಅಮೃತಸರದಲ್ಲಿ ಸೇನೆಯು ಧ್ವಜ ಪಥಸಂಚಲನವನ್ನು ನಡೆಸಿದೆ
