ಮನೋರಂಜನೆ

ಅಮಿತಾಭ್ ಬಚ್ಚನ್ ರನ್ನು 4 ಕಿ.ಮೀ ವರೆಗೆ ಹಿಂಬಾಲಿಸಿದ ಹುಲಿ !

Pinterest LinkedIn Tumblr

amith

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರನ್ನು ಹುಲಿಯೊಂದು ಹಿಂಬಾಲಿಸಿದೆ. ಒಂದು ಕಿ.ಮೀ ಅಲ್ಲ, ಬರೋಬ್ಬರಿ 4 ಕಿ.ಮೀಗಳವರಗೆ ಹುಲಿ ಬಿಗ್ ಬಿ ಅವರನ್ನು ಫಾಲೋ ಮಾಡಿದೆ.

ಬೊರಿವಿಲಿಯಲ್ಲಿರುವ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ ನಲ್ಲಿ ಸಫಾರಿ ವೇಳೆ ಬಿಗ್ ಬಿಯನ್ನು 4 ಕಿಲೋ ಮೀಟರ್‍ವರೆಗೆ ಹುಲಿ ಹಿಂಬಾಲಿಸಿದೆ.

amith1

amith12

ಸುದ್ದಿ ಓದಿ ಕನ್‍ಫ್ಯೂಸ್ ಆಗಬೇಡಿ, ಅಮಿತಾಬ್ ಬಚ್ಚನ್ ಅವರು ಮಹಾರಾಷ್ಟ್ರ ಸರ್ಕಾರದ ಹುಲಿ ಸಂರಕ್ಷಣಾ ರಾಯಭಾರಿಯಾಗಿ ಆಯ್ಕೆ ಯಾಗಿದ್ದು, ಮಂಗಳವಾರ ಮಂತ್ರಿಗಳು ಮತ್ತು ರಾಜಕೀಯ ನಾಯಕರ ಜೊತೆ ಹುಲಿ ಸಫಾರಿಗೆ ತೆರಳಿದ್ದರು. ಈ ವೇಳೆ ಹುಲಿ ಇವರಿದ್ದ ವಾಹನವನ್ನು 4 ಕಿ. ಮೀ ವರೆಗೆ ಹಿಂಬಾಲಿಸಿದೆ.

ಅಮಿತಾಭ್ ಬಚ್ಚನ್ ಅವರು ಹುಲಿ ಹಿಂಬಾಲಿಸುತ್ತಿರುವ ದೃಶ್ಯವಿರುವ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದು, ಸಮಾನ್ಯವಾಗಿ ಹುಲಿ ಇಷ್ಟೊಂದು ದೂರದವರೆಗೆ ಹಿಂಬಾಲಿಸುವುದಿಲ್ಲ ಇದೊಂದು ರೋಚಕ ಅನುಭವ ಎಂದು ಬಣ್ಣಿಸಿದ್ದಾರೆ.

Write A Comment