ಮುಂಬೈ

ಇಂದ್ರಾಣಿಗೆ ಪ್ರಜ್ಞೆ ಮರುಕಳಿಸಿದೆ: ಜೆಜೆ ಆಸ್ಪತ್ರೆ ವೈದ್ಯರು

Pinterest LinkedIn Tumblr

Indraniಮುಂಬೈ: ಅಧಿಕ ಪ್ರಮಾಣದಲ್ಲಿ ಔಷಧಿಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಶೀನಾ ಬೋರಾ ಹತ್ಯೆ ಪ್ರಕರಣ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಗೆ ಪ್ರಜ್ಞೆ ಮರುಕಳಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅಧಿಕ ಮಾತ್ರೆ ಸೇವನೆ ಮಾಡಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಇಂದ್ರಾಣಿ ಮುಖರ್ಜಿಯನ್ನು ದಕ್ಷಿಣ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ಇಂದ್ರಾಣಿ ಅವರ ಸ್ಥಿತಿ ಗಂಭೀರವಾಗಿದ್ದು, ಇನ್ನು 48 ಗಂಟೆಗಳ ಕಾಲ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ಜೆಜೆ ಆಸ್ಪತ್ರೆ ಡೀನ್ ಡಾ. ಟಿಪಿ ಲಹಾನೆ ಹೇಳಿದ್ದಾರೆ.

ಇಂದು ಇಂದ್ರಾಣಿ ಆರೋಗ್ಯ ಸುಧಾರಿಸಿದ್ದು, ಅವರಿಗೆ ಪ್ರಜ್ಞೆ ಬಂದಿದೆ. ನಾವು ಹೇಳುವುದು ಅವರ ಅರಿವಿಗೆ ಬರುತ್ತಿದೆ. ಸದ್ಯ ಇಂದ್ರಾಣಿ ಅವರಿಗೆ ಕುಡಿಯಲು ನೀರು ಕೊಡಲಾಗಿದೆ. ಇನ್ನು 48 ಗಂಟೆಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದಾರೆ.

Write A Comment