ಮುಂಬೈ

‘ಮಾಂಸ’ ನಿಷೇಧ: ಮುಂಬೈ ಹೈಕೋರ್ಟ್ ಆದೇಶದ ವಿರುದ್ಧ ಅರ್ಜಿ ವಜಾಗೊಳಿಸಿದ ಸುಪ್ರೀಂ

Pinterest LinkedIn Tumblr

Meat-shops

ನವದೆಹಲಿ: ಮುಂಬೈ ನಲ್ಲಿ ಮಾಂಸ ಮಾರಾಟಕ್ಕೆ ನಿಷೇಧಕ್ಕೆ ತಡೆ ನೀಡಿದ್ದ ಮುಂಬೈ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಪಿಐಎಲ್ ನ್ನು ಸುಪೀಂ ಕೋರ್ಟ್ ವಜಾಗೊಳಿಸಿದೆ.

ಜೈನರ ಹಬ್ಬ ಪರ್ಯುಶನ್ ಪ್ರಯುಕ್ತ ಮಾಂಸ ಮಾರಾಟ ಮಾಡಿರುವ ಕ್ರಮಕ್ಕೆ ಮುಂಬೈ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ, ನಿಷೇಧಕ್ಕೆ ತಡೆ ನೀಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜೈನ ಸಮುದಾಯದವರು ಸುಪೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಯಿತಾದರೂ ಸುಪ್ರೀಂ ಕೋರ್ಟ್ ನ ಟಿ ಎಸ್ ಠಾಕೂರ್ ಮತ್ತು ಕುರಿಯನ್ ಜೋಸೆಫ್ ಅವರ ವಿಭಾಗೀಯ ಪೀಠ, ಮಾಂಸ ನಿಷೇಧವನ್ನು ಮತ್ತೊಬ್ಬರ ಮೇಲೆ ಹೇರಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.

ಸಂತ ಕಬೀರ್ ರ ಪದ್ಯವನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್ ನ ವಿಭಾಗೀಯ ಪೀಠ, ಬೋಧನೆ ಒಳ್ಳೆಯದ್ದೇ ಆಗಿದ್ದರೂ ಅದನ್ನು ಮತ್ತೊಬ್ಬರ ಮೇಲೆ ಹೇರಲು ಸಾಧ್ಯವಿಲ್ಲ, ಜನರು ಏನನ್ನು ಬಿತ್ತುತ್ತಾರೋ, ಅದನ್ನೇ ವಾಪಸ್ ಪಡೆಯುತ್ತಾರೆ ಎಂದು ಹೇಳಿದೆ.

ಮಾಂಸ ಮಾರಾಟ ನಿಷೇಧ ಸೀಮಿತ ಪ್ರದೇಶಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜೈನರ ಹಬ್ಬ ಪರ್ಯುಶನ್ ಪ್ರಯುಕ್ತ ಮಹಾರಾಷ್ಟ್ರ ಸರ್ಕಾರ ಎರಡು ನಾಲ್ಕು ದಿನಗಳ ಕಾಲ ಮುಂಬೈ ನಗರಾದ್ಯಂತ ಮಾಂಸ ಮಾರಾಟಕ್ಕೆ ನಿಷೇಧ ವಿಧಿಸಿತ್ತು. ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಮುಂಬೈ ಹೈಕೋರ್ಟ್, ನಿಷೇಧದ ಔಚಿತ್ಯವನ್ನು ಪ್ರಶ್ನಿಸಿದ್ದಲ್ಲದೇ, ನಿಷೇಧ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿತ್ತು.

Write A Comment