ರಾಷ್ಟ್ರೀಯ

ಕಲಾವಿದ ಎಂಎಫ್ ಹುಸೇನ್ ರ ನೂರನೇ ಜನ್ಮ ದಿನಾಚರಣೆ: ಗೂಗಲ್ ನಿಂದ ಗೌರವ

Pinterest LinkedIn Tumblr

doodle-hussain

ನವದೆಹಲಿ: ಖ್ಯಾತ ಚಿತ್ರ ಕಲಾವಿದ ಎಂಎಫ್ ಹುಸೇನ್ ಅವರ ನೂರನೇ ಜನ್ಮ ದಿನಾಚರಣೆಯ ನಿಮಿತ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಸಂಸ್ಥೆ ವಿಶೇಷ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.

ಸೆಪ್ಟೆಂಬರ್ 17 ಎಂಎಫ್ ಹುಸೇನ್ ಅವರ ಜನ್ಮ ದಿನಾಚರಣೆಯಾಗಿದ್ದು, ನಮ್ಮನ್ನಗಿಲಿರುವ ಈ ಮಹಾನ್ ಕಲಾವಿದನನ್ನು ಗೂಗಲ್ ವಿಶೇಷ ಡೂಡಲ್ ಮೂಲಕ ಸ್ಮರಿಸಿದೆ. 1915 ಸೆಪ್ಟಂಬರ್‌ 17ರಂದು ಮಹಾರಾಷ್ಟ್ರದ ಪಂಡರಾಪುರದಲ್ಲಿ ಜನಿಸಿಗ ಹೇಸೇನ್ ಅವರ ಪೂರ್ಣ ಹೆಸರು ಮಕ್ಬೂಲ್‌ ಫಿದಾ ಹುಸೈನ್‌ ಎಂದು. ತಮ್ಮ ಅಸಮಾನ್ಯ ಚಿತ್ರಕಲೆಯಿಂದಲೇ ವಿಶ್ವವಿಖ್ಯಾತಿಗಳಿಸಿದ ಹುಸೇನ್ ಅವರು ಭಾರತ ಮಾತ್ರವಲ್ಲದೆ ವಿದೇಶಗಲ್ಲಿಯೂ ಚಿರಪರಿಚಿತರಾಗಿದ್ದರು.

ತಮ್ಮ ಅಮೂರ್ತ ಶೈಲಿಯ ಚಿತ್ರಕಲೆಗಳಿಂದ ಹೆಸರುವಾಸಿಯಾಗಿದ್ದ ಹುಸೇನ್‌ ಅವರು ‘ಭಾರತದ ಪಿಕಾಸೋ’ ಎಂದೇ ಖ್ಯಾತರಾಗಿದ್ದರು. ಇದೇ ವೇಳೆ ತಮ್ಮ ನೇರ ಮತ್ತು ನಿಷ್ಠುರ ಶೈಲಿಯನ್ನು ತಮ್ಮ ಚಿತ್ರಕಲೆಗಳಲ್ಲಿ ಬಿಂಬಿಸುತ್ತಿದ್ದ ಹುಸೇನ್ ಅವರು ಕೆಲ ನಿರ್ಧಿಷ್ಟ ಸಮುದಾಯಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಹುಸೇನ್ ಕೇವಲ ಚಿತ್ರಕಲೆಯಲ್ಲಿ ಮಾತ್ರವಲ್ಲದೇ ಛಾಯಾಗ್ರಹಣದಲ್ಲಿ ಮತ್ತು ಚಲನಚಿತ್ರಕಾರರೂ ಆಗಿದ್ದರು.

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರು ನಟಿಸಿದ್ದ “ಗಜಗಾಮಿನಿ” ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಬಾಲಿವುಡ್ ನ ಟಾಪ್ ನಟರಾದ ಶಾರುಖ್ ಖಾನ್ ಹಾಗೂ ನಾಸಿರುದ್ದೀನ್ ಶಾ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಭೂಪೇನ್‌ ಹಜಾರಿಕಾ ಅವರು ಸಂಗೀತ ನೀಡಿದ್ದರು. ಹುಸೇನ್‌ ಅವರು ತಮ್ಮ 95ನೇ ವಯಸ್ಸಿನಲ್ಲಿ 2011ರ ಜೂನ್‌ 9ರಂದು ನಿಧನರಾಗಿದ್ದರು.

Write A Comment