ಮುಂಬೈ: 2006ರ ಮುಂಬೈ ರೈಲು ಸ್ಫೋಟ ಪ್ರಕರಣದ ತೀರ್ಪು ಶುಕ್ರವಾರ ಹೊರಬಿದಿದ್ದು 12 ಜನರನ್ನು ಅಪರಾಧಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನ ಆರೋಪಿಗಳ ಪೈಕಿ 12 ಜನರನ್ನು ತಪ್ಪತಸ್ಥರೆಂದು ‘ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸಡ್ ಕ್ರೈಮ್ ಆ್ಯಕ್ಟ್ ’ನ ವಿಶೇಷ ನ್ಯಾಯಾಲಯ (ಮೊಕಾ) ತೀರ್ಪು ಪ್ರಕಟಿಸಿದೆ.
ಆರೋಪ ಸಾಬೀತಾಗದ ಓರ್ವ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಸತತ 9 ವರ್ಷಗಳ ಕಾಲ ಈ ಪ್ರಕರಣದ ವಿಚಾರಣೆ ನಡೆದಿತ್ತು. ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ನ್ಯಾಯಾಧೀಶರು ಸೋಮವಾರ ಪ್ರಕಟಿಸಲಿದ್ದಾರೆ.
ತಪ್ಪಿತಸ್ಥರು: ಕಮಲ್ ಅಹಮ್ಮದ್ ಅನ್ಸಾರಿ (37), ತನ್ವಿರ್ ಅಹಮದ್ ಅನ್ಸಾರಿ (37), ಎಮ್. ಎಫ್ ಶೇಕ್ (36), ಇ. ಸಿದ್ದಿಕಿ (30), ಮೊಹಮ್ಮದ್ ಮಜಿದ್ ಷರೀಪ್ (32), ಅಲಾಂ ಶೇಕ್ (32), ಎಂ. ಶಾಜಿದ್ ಅನ್ಸಾರಿ (34), ಎಂ. ಶೇಕ್ (27), ಜಮೀರ್ ಅಹಮ್ಮದ್ ಶೇಕ್ (36), ನವೀದ್ ಹುಸೇನ್ ಖಾನ್ (36), ಆಸೀಪ್ ಖಾನ್ (38), ಸೋಹೈಲ್ ಮೊಹಮ್ಮದ್ ಶೇಕ್ (43).
ಪ್ರಕರಣದ ಮತ್ತೊಬ್ಬ ಆರೋಪಿ ಅಬ್ದುಲ್ ವಾಜಿದ್ ಶೇಕ್ ಖುಲಾಸೆಗೊಂಡಿದ್ದಾರೆ. ಈ ಸರಣಿ ಸ್ಫೋಟದಲ್ಲಿ 188 ಜನರು ಮೃತಪಟ್ಟಿದ್ದರು.
