ರಾಷ್ಟ್ರೀಯ

ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಆರೋಪ: ಕೇಂದ್ರ -ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

Pinterest LinkedIn Tumblr

Rohini-Salian

ನವದೆಹಲಿ: ಮಾಲೆಗಾಂವ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ತನ್ನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸುವಂತೆ ಸೂಚಿಸಿ ಸುಪ್ರೀಂ ಕೋರ್ಟ್ ಕೇಂದ್ರ, ರಾಷ್ಟ್ರೀಯ ತನಿಖಾ ದಳ ಹಾಗೂ ಮಹಾರಾಷ್ಟ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಮಾಲೆಗಾಂವ್ ಸ್ಫೋಟದ ಸಂತ್ರಸ್ತರು ಹಾಗೂ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದೆರ್ ಸಲ್ಲಿಸಿದ್ದ ದೂರು ಅರ್ಜಿಯೊಂದನ್ನು ವಿಚಾರಣೆ ನಡೆಸಿದ ನ್ಯಾಯಪೀಠವು ಈ ನೋಟಿಸ್ ಜಾರಿಗೊಳಿಸಿದೆ. ಮಾಲೆಗಾಂವ್ ಸ್ಫೋಟ ತನಿಖೆಯ ವಿಷಯದಲ್ಲಿ ಮೃಧು ಧೋರಣೆ ತಾಳುವಂತೆ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರ ಒತ್ತಡ ಹೇರಿದೆ ಎಂದು ದೂರುದಾರರು ಆಪಾದಿಸಿದ್ದರು.

ಮಾಲೆಗಾಂವ್ ಸ್ಫೋಟ ತನಿಖೆಯ ವಿಷಯದಲ್ಲಿ ಮೃಧು ಧೋರಣೆ ತಾಳುವಂತೆ ತನ್ನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ರೋಹಿಣಿ ಸಾಲ್ಯಾನ್ ಆರೋಪಿಸಿದ್ದರು. ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆಯ ನ್ಯಾಯವಾದಿಗಳ ಮಂಡಳಿಯಿಂದ ತಮ್ಮನ್ನು ಕೈಬಿಡಲಾಗುತ್ತಿದೆ, ನೀವು ಇನ್ನು ಮುಂದೆ ಈ ವಿಚಾರಣೆಯ ಭಾಗವಾಗಿರುವುದಿಲ್ಲ ಎಂದು ಎನ್ ಐಎ ಅಧಿಕಾರಿಯೊಬ್ಬರು ತನಗೆ ತಿಳಿಸಿದುದಾಗಿ ರೋಹಿಣಿ ಸಾಲಿಯಾನ್ ಆರೋಪಿಸಿದ್ದರು.

Write A Comment