ಮುಂಬೈ

ದೇವಾಡಿಗ ಸಂಘ ಮುಂಬಯಿ, ಪ್ರಾದೇಶಿಕ ಸಮನ್ವಯ ಸಮಿತಿ ಠಾಣೆವತಿಯಿಂದ ಆಟಿಡ್‌ ಒಂಜಿ ದಿನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

Pinterest LinkedIn Tumblr

???????????????????????????????

ದೇವಾಡಿಗ ಸಂಘ ಮುಂಬಯಿ, ಪ್ರಾದೇಶಿಕ ಸಮನ್ವಯ ಸಮಿತಿ ಠಾಣೆ ವತಿಯಿಂದ ಆಟಿಡ್‌ ಒಂಜಿ ದಿನ ಮತ್ತು ssc ಪರೀಕ್ಷೆಯಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವು ದಿನಾಂಕ ಆಗಸ್ಟ್‌ ೨ರಂದು ರಘುನಾಥ್‌ ನಗರ್‌, ಟೀನ್‌ ಹಾಟ್‌ ನಾಕ, ಠಾಣೆ ಇಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಆನಂದ್‌ ಎನ್‌ ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಶೇರಿಗಾರ್‌, ಸಮಿತಿಯ ಉಪ ಕಾರ್ಯಾಧ್ಯಕ್ಷ ಅಶೋಕ್‌ ದೇವಾಡಿಗ, ಕಾರ್ಯದರ್ಶಿ ಪ್ರವೀಣ್‌ ಸಾಲಿಯಾನ್‌, ಕೋಶಾಧಿಕಾರಿ ವಿಜಯ್‌ ಕುಮಾರ್‌ ಶೇರಿಗಾರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮಂತಿ ಪ್ರಮೀಳಾ ಶೇರಿಗಾರ್‌ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

???????????????????????????????

???????????????????????????????

???????????????????????????????

???????????????????????????????

IMG-20150903-WA0022

ಸಮಿತಿಯ ಮಹಿಳಾ ಸದಸ್ಯರು ಆಟಿಯಲ್ಲಿ ತಯಾರಿಸುವ ಸುಮಾರು ೨೫ ತರಹದ ವಿಶೇಷ ಹಾಗೂ ರುಚಿಕರವಾದ ಮತ್ತೆದ ಗಂಜಿ, ತೇವುದೆ ವಡೆ, ಪತ್ರಡ್ಡ್‌, ರಚ್ಚದ ಚಟ್ನಿ, ಕಪ್ಪ ರುಟ್ಟಿ, ಉಪ್ಪಡಚ್ಚೀರ್‌, ಕುಡುತ್ತ ಚಟ್ನಿ, ಪೆಲಕಾಯಿದ ಇರೆತ್ತ ಗುಂಡ, ಬೆಲ್ಲ-ತಾರೈದ ಪುಂಡಿ, ನೀರ್‌ಪುಂಡಿ, ಪರ್‌-ಸೇವಿಗೆ, ಅರೆಪುದ ಆಡ್ಡೈ ಇತ್ಯಾದಿ ಆಡುಗೆಯನ್ನು ಮಾಡಿ ತಂದು ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿದರು.
ಶ್ರೀಮಂತಿ ಪ್ರಮೀಳಾ ಶೇರಿಗಾರ್‌ ರವರು ಮಹಿಳೆಯರಿಗೆ ಅವರ ರುಚಿಕರವಾದ ಆಡುಗೆಗೆ ಬಹುಮಾನವಿತ್ತು ಪ್ರಶಂಸಿಸಿದರು ಅಲ್ಲದೆ ಆಟಿ ತಿಂಗಳ ಪ್ರಾಮುಖ್ಯತೆಯನ್ನು ಹಾಗೂ ಆಟಿ ಕೊಡಂಜೆ ಅಲ್ಲದೆ ಪಾಲೆದ ಕಷಾಯ, ಆಟಿದ ಅಮಾವಾಸ್ಯೆಯ ವಿಶೇಷತೆ ಮತ್ತು ಮಹತ್ವವನ್ನು ವಿವರಿಸಿದರು.

ssc ಪರೀಕ್ಷೆಯಲ್ಲಿ ೯೪.೬೦% ಪಡೆದ ಕು.ಮೈತ್ರಿ ದಿವಾಕರ್‌ ದೇವಾಡಿಗ, ೮೩.೪೦% ಪಡೆದ ಕಾವ್ಯಶ್ರೀ ರಾಮ ದೇವಾಡಿಗ ಇವರಿಗೆ ಠಾಣೆಯ ಉದ್ಯಮಿ ಶ್ರೀಜಗನ್ನಾಥ್‌ ದೇವಾಡಿಗ ರವರ ಪ್ರಯೋಜಕತ್ವದಲ್ಲಿ ಬಹುಮಾನ ವಿತರಿಸಲಾಯಿತು. ಕೊನೆಗೆ ಪ್ರೀತಿ ಭೋಜನದೊಂದಿಗೆ ಶ್ರೀ ಪ್ರವೀಣ್‌ ಸಾಲಿಯಾನ್‌ ಇವರ ಧನ್ಯವಾದ ಅರ್ಪಣೆಯೊಂದಿಗೆ ಕಾರ್ಯಕ್ರಮ ಅಂತ್ಯವಾಯಿತು.

Write A Comment