ಮುಂಬೈ: ಜು.30 ರ ಬೆಳಿಗ್ಗೆ ನೇಣುಗಂಬಕ್ಕೆ ಏರಿಸಲಾದ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ನ ಅಂತ್ಯಕ್ರಿಯೆ ಮುಂಬೈನ ಬಡಾ ಕಾಬ್ರಿಸ್ತಾನ ರಸ್ತೆಯಲ್ಲಿರುವ ಚಂದನ್ ವಾಡಿ ಸ್ಮಶಾನ ಭೂಮಿಯಲ್ಲಿ ನಡೆದಿದೆ.
ಯಾಕೂಬ್ ನನ್ನು ಗಲ್ಲಿಗೇರಿಸಿದ ನಂತರ, ಕುಟುಂಬ ಅಂತಿಮ ವಿಧಿಗಳನ್ನು ಮುಂಬೈನಲ್ಲಿ ನೆರವೇರಿಸಲು ಕಠಿಣ ಷರತ್ತುಳನ್ನು ವಿಧಿಸಿ ಅವಕಾಶ ನಿಡಲಾಗಿತ್ತು. ಶವವನ್ನು ಮುಂಬೈ ನಲ್ಲಿರುವ ಯಾಕೂಬ್ ಮೆಮನ್ ನ ಮಾಹಿಮ್ ನಿವಾಸಕ್ಕೆ ತರಲಾಯಿತು. ಪ್ರಾಥನೆಗಳ ನಂತರ ಕಾಬ್ರಿಸ್ತಾನ ರಸ್ತೆಯಲ್ಲಿರುವ ಚಂದನ್ ವಾಡಿ ಸ್ಮಶಾನ ಭೂಮಿಯಲ್ಲಿ ಯಾಕೂಬ್ ಅಂತ್ಯಕ್ರಿಯೆ ನಡೆದಿದೆ.
ಜೈಲು ಅಧಿಕಾರಿಗಳು ಕುಟುಂಬ ವಶಕ್ಕೆ ನೀಡದೆ ಜೈಲಿನ ಆವರಣದಲ್ಲೇ ಅಂತಿಮ ವಿಧಿಯನ್ನು ನಡೆಸಲು ನಿರ್ಧರಿಸಿದ್ದರು. ಆದರೆ ಯಾಕೂಬ್ ನನ್ನು ಗಲ್ಲಿಗೇರಿಸಿದ ನಂತರ, ಕುಟುಂಬ ಅಂತಿಮ ವಿಧಿಗಳನ್ನು ಮುಂಬೈನಲ್ಲಿ ನೆರವೇರಿಸಲು ಅನುವು ಮಾಡಿಕೊಡಲು ದೇಹವನ್ನು ವಶಕ್ಕೆ ನೀಡುವಂತೆ ಮೆಮನ್ ಸಹೋದರ ಸುಲೈಮಾನ್ ಜೈಲು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಕಠಿಣ ಷರತ್ತುಗಳೊಂದಿಗೆ ಅನುಮತಿ ನೀಡಿ ದೇಹವನ್ನು ವಶಕ್ಕೆ ನೀಡಲಾಗಿತ್ತು.