ಮುಂಬೈ

ಇಂತಹ ಖದೀಮರೂ ಇರ್ತಾರ್ ನೋಡ್ರೀ !

Pinterest LinkedIn Tumblr

mumbaiಮುಂಬೈ: ಆರೋಪಿಗಳಿಂದ ವಶಪಡಿಸಿಕೊಂಡು ನ್ಯಾಯಾಲಯದ ಸ್ಟೋರ್ ರೂಮಿನಲ್ಲಿಟ್ಟಿದ್ದ ಗನ್ ಮತ್ತು ರಿವಾಲ್ವರ್ ಅನ್ನು ಪೊಲೀಸ್ ಪೇದೆಯೊಬ್ಬ ಕದ್ದು ಮಾರಾಟ ಮಾಡಿರುವ ಘಟನೆ ನಡೆದಿದೆ.

ಮುಂಬೈನ ಥಾಣೆಯ ಶಾಂತಿನಗರ ಪೊಲೀಸ್ ಠಾಣೆಯ ಪೇದೆ ಸಚಿನ್ ಇಂಗ್ಳೆ ಎಂಬಾತ ಈ ಕಳ್ಳತನವೆಸಗಿದ್ದು, ಈಗ ಬಂಧನಕ್ಕೊಳಗಾಗಿದ್ದಾನೆ. ಸಚಿನ್ ಇಂಗ್ಳೆಯನ್ನು ನಾಲ್ಕು ತಿಂಗಳ ಹಿಂದೆ ಭಿವಂಡಿ ನ್ಯಾಯಾಲಯದ ಸ್ಟೋರ್ ರೂಮಿನ ಕಾವಲಿಗೆ ನೇಮಿಸಿದ್ದ ವೇಳೆ ಈ ಕೃತ್ಯವೆಸಗಿದ್ದಾನೆ.

ಇತ್ತೀಚೆಗೆ ಪ್ರಕರಣವೊಂದರಲ್ಲಿ ಸಾಕ್ಷಿಯಾಗಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ತಾವು ವಶಪಡಿಸಿಕೊಂಡಿದ್ದ ರಿವಾಲ್ವರ್ ಗಾಗಿ ಪೊಲೀಸರು ಸ್ಟೋರ್ ರೂಮ್ ಪರಿಶೀಲಿಸಿದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ. ಕಂಟ್ರಿ ಮೇಡ್ ಗನ್ ಹಾಗೂ ರಿವಾಲ್ವರ್ ನ್ನು ಕದ್ದಿದ್ದ ಸಚಿನ್ ಇಂಗ್ಳೆ ಅದನ್ನು ಅಪರಾಧಿಗಳಿಗೆ ಮಾರಾಟ ಮಾಡಿರುವುದು ಪೊಲೀಸ್ ಇಲಾಖೆಯನ್ನು ಬೆಚ್ಚಿ ಬೀಳಿಸಿದೆ. ಅಲ್ಲದೇ ನ್ಯಾಯಾಲಯಕ್ಕೆ ಸಾಕ್ಷ್ಯಾಧಾರ ಒದಗಿಸಬೇಕಾಗಿರುವ ಪೊಲೀಸರು ಈಗ ಅದಿಲ್ಲದೇ ಇರುವ ಕಾರಣ ಪ್ರಕರಣ ವಜಾಗೊಳ್ಳಬಹುದೆಂಬ ಭೀತಿಯಲ್ಲಿದ್ದಾರೆ. ನ್ಯಾಯಾಲಯದ ಸ್ಟೋರ್ ರೂಮಿನ ಕಾವಲಿಗೆ ನೇಮಿಸಿದ್ದ ಪೇದೆಯೇ ಈ ಕಳ್ಳತನವೆಸಗಿರುವುದು ಇಲಾಖೆಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ.

Write A Comment