ಮುಂಬೈ

1900 ಕೋಟಿ ರೂ. ವೆಚ್ಚದ ಶಿವಾಜಿ ಪ್ರತಿಮೆಗೆ ಝಡ್ ಪ್ಲಸ್ ಭದ್ರತೆ !

Pinterest LinkedIn Tumblr

3714IndiaTvf01858_mಮುಂಬೈ: ಅಮೆರಿಕಾದ ಸ್ಟ್ಯಾಚೂ ಆಫ್ ಲಿಬರ್ಟಿ ಮಾದರಿಯಲ್ಲಿ ಮುಂಬೈನ ಅರಬ್ಬಿ ಸಮುದ್ರದಲ್ಲಿ ಸ್ಥಾಪಿಸಲಾಗುತ್ತಿರುವ 1900 ಕೋಟಿ ರೂ. ವೆಚ್ಚದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ.

2019 ರಲ್ಲಿ ಅಧಿಕೃತವಾಗಿ ಆರಂಭವಾಗಲಿರುವ ಈ ಸ್ಥಳಕ್ಕೆ ಪ್ರತಿ ನಿತ್ಯ ಕನಿಷ್ಟ 1000 ಮಂದಿ ಭೇಟಿ ನೀಡುತ್ತಿದ್ದು, ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ. 26/11 ಮಾದರಿಯಲ್ಲಿ ಉಗ್ರರ ದಾಳಿ ನಡೆಯಬಹುದೆಂಬ ಹಿನ್ನೆಲೆಯಲ್ಲಿ ಈ ಸ್ಥಳಕ್ಕೆ ಈಗ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಮುಂಬೈ ಪೊಲೀಸರೊಂದಿಗೆ ರಾಷ್ಟ್ರೀಯ ಭದ್ರತಾ ಪಡೆ ಹಾಗೂ ಕೋಸ್ಟಲ್ ಗಾರ್ಡ್ ಸಿಬ್ಬಂದಿ ಈ ಸ್ಥಳದ ಮೇಲೆ ನಿರಂತರ ನಿಗಾ ಇಟ್ಟಿದ್ದಾರಲ್ಲದೇ ಎಲ್ಲೆಡೆ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. 190 ಅಡಿ ಎತ್ತರದ ಪ್ರತಿಮೆ 2019 ರಲ್ಲಿ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದ್ದು, ಪ್ರಮುಖ ಪ್ರವಾಸಿ ಸ್ಥಳವಾಗುವ ನಿರೀಕ್ಷೆ ಹೊಂದಲಾಗಿದೆ.

Write A Comment