ಅಂತರಾಷ್ಟ್ರೀಯ

‘ಲಾಫಿಂಗ್ ಗ್ಯಾಸ್’ ಸೇವಿಸಿ ಸಾವನ್ನಪ್ಪಿದ ಯುವಕ

Pinterest LinkedIn Tumblr

8798Laughing-gas-265__1616414347ಲಂಡನ್: ‘ಲಾಫಿಂಗ್ ಗ್ಯಾಸ್’ ಎಂದೇ ಕರೆಯಲ್ಪಡುವ ನೈಟ್ರಸ್ ಆಕ್ಸೈಡ್ ಸೇವಿಸಿದ 18 ವರ್ಷದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.

ಲಂಡನ್ ನ ಬೆಕ್ಸ್ ಲೇ ನಗರದಲ್ಲಿ ಶನಿವಾರದಂದು ಪಾರ್ಟಿ ಮಾಡುತ್ತಿದ್ದ ವೇಳೆ ಈ ಯುವಕ ಲಾಫಿಂಗ್ ಗ್ಯಾಸ್ ಸೇವಿಸಿದ್ದನೆಂದು ಹೇಳಲಾಗಿದ್ದು, ಬೀದಿಯಲ್ಲಿ ಕುಸಿದು ಬಿದ್ದ ಈತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಲು ಮದ್ಯಪಾನ ಮಾಡಿದ್ದ ಕಾರಣ ಆತ ಬಿದ್ದಿರಬಹುದೆಂದು ಭಾವಿಸಲಾಗಿತ್ತಾದರೂ ವೈದ್ಯರ ತಪಾಸಣೆ ವೇಳೆ ಲಾಫಿಂಗ್ ಗ್ಯಾಸ್ ಸೇವಿಸಿರುವುದು ಕಂಡು ಬಂದಿತ್ತು.

ಆಸ್ಪತ್ರೆ ಸೇರಿದ ಎರಡು ಗಂಟೆಗಳ ಬಳಿಕ ಯುವಕ ಸಾವನ್ನಪ್ಪಿದ್ದು, 2006 ರಿಂದ 2012 ರವರೆಗೆ ಯು.ಕೆ. ಯಲ್ಲಿ 17 ಮಂದಿ ಲಾಫಿಂಗ್ ಗ್ಯಾಸ್ ಸೇವಿಸಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಲಾಫಿಂಗ್ ಗ್ಯಾಸ್ ಸೇವನೆಯಿಂದ ದೇಹಕ್ಕೆ ಆಕ್ಸಿಜನ್ ಪೂರೈಕೆ ಪ್ರಮಾಣ ಕಡಿಮೆಯಾಗುವುದಲ್ಲದೇ ರಕ್ತದೊತ್ತಡ ಸಹ ಕುಸಿಯುತ್ತದೆ ಎನ್ನಲಾಗಿದೆ. ಅಂತಿಮವಾಗಿ ಇದು ಹೃದಯಾಘಾತಕ್ಕೆ ಕಾರಣವಾಗಬಹುದೆಂದು ವೈದ್ಯರು ತಿಳಿಸಿದ್ದಾರೆ.

Write A Comment