ಮುಂಬೈ

7 ಗಂಟೆಗಳ ಕಾಲ ವಿದ್ಯಾರ್ಥಿಗಳನ್ನು ಉರಿ ಬಿಸಿಲಿನಲ್ಲಿ ನಿಲ್ಲಿಸಿದ್ದ ಶಿಕ್ಷಕಿ

Pinterest LinkedIn Tumblr

42496ಮುಂಬೈ: ಶಾಲೆಗೆ ಗೈರು ಹಾಜರಾಗಿದ್ದರೆಂಬ ಕ್ಷುಲ್ಲಕ ಕಾರಣಕ್ಕಾಗಿ ರಂಜಾನ್ ಉಪವಾಸ ಮಾಡುತ್ತಿದ್ದ 40 ಮಂದಿ ವಿದ್ಯಾರ್ಥಿಗಳನ್ನು 7 ಗಂಟೆಗಳ ಕಾಲ ಉರಿ ಬಿಸಿಲಿನಲ್ಲಿ ನಿಲ್ಲಿಸುವ ಮೂಲಕ ಶಿಕ್ಷಕಿಯೊಬ್ಬರು ಅಮಾನವೀಯವಾಗಿ ವರ್ತಿಸಿದ್ದಾರೆ.

ಮುಂಬೈನ ಬೈಕುಲ್ಲಾದಲ್ಲಿರುವ ಸೇಂಟ್ ಆಗ್ನೆಸ್ ಹೈಸ್ಕೂಲ್ ನ ಪ್ರಾಂಶುಪಾಲೆಯೂ ಆಗಿರುವ ಶಿಕ್ಷಕಿ ಲೀಸಾ ಡಿಮೆಲ್ಲೋ ಎಂಬವರೇ ಈ ಶಿಕ್ಷೆ ನೀಡುವ ಮೂಲಕ ವಿದ್ಯಾರ್ಥಿಗಳ ಪೋಷಕರಿಂದ ಪ್ರತಿಭಟನೆ ಎದುರಿಸಿದ್ದಾರಲ್ಲದೇ ಅವರ ವಿರುದ್ದ ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ.

ಜುಲೈ 8 ರ ರಾತ್ರಿ ಧಾರ್ಮಿಕ ಕಾರ್ಯಕ್ರಮವಿದ್ದ ಕಾರಣ ರಾತ್ರಿಯೆಲ್ಲಾ ನಿದ್ರೆಗೆಟ್ಟಿದ್ದ ಈ ವಿದ್ಯಾರ್ಥಿಗಳು ಜುಲೈ 9 ರಂದು ಶಾಲೆಗೆ ಗೈರು ಹಾಜರಾಗಿದ್ದರು ಎನ್ನಲಾಗಿದೆ. ಹೀಗಾಗಿ ಶಿಕ್ಷಕಿ ಲೀಸಾ ಡಿಮೆಲ್ಲೋ ವಿದ್ಯಾರ್ಥಿಗಳು ರಂಜಾನ್ ಉಪವಾಸ ಮಾಡುತ್ತಿದ್ದಾರೆಂಬುದನ್ನೂ ಪರಿಗಣಿಸದೆ ಉರಿ ಬಿಸಿಲಿನಲ್ಲಿ ಏಳು ಗಂಟೆಗಳ ಕಾಲ ನಿಲ್ಲಿಸಿದ್ದಾರೆ. ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ ಪೋಷಕರು, ನಾಗಪಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

Write A Comment