ಮುಂಬೈ

ಮನೆ ಮನೆಗೆ ಹಾಲು ಹಾಕುತ್ತಿದ್ದವಳು,.. ಇಂದು ನೂರಾರು ಕೋಟಿ ಒಡತಿಯಾಗಿ ಇದೀಗ ಜೈಲು ಸೇರಿದ ಕಥೆ..!

Pinterest LinkedIn Tumblr

meow-meow

ಮುಂಬೈ,ಜ.6: ತಿಂಗಳಿಗೆ ಕೇವಲ ನೂರಾರು ರೂ. ಗಳಿಸುತ್ತಿದ್ದ ಮಹಿಳೆ ಇಂದು ನೂರಾರು ಕೋಟಿ ಒಡತಿಯಾಗಿ ಇದೀಗ ಜೈಲು ಪಾಲಾಗಿರುವ ಸಿನಿಮೀಯ ರೀತಿಯ ಘಟನೆಯೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

1980ರಲ್ಲಿ ಹಾಲು ಮಾರಿಕೊಂಡು ಪ್ರತಿನಿತ್ಯ ನೂರು, ಇನ್ನೂರು ರೂ. ಸಂಪಾದಿಸುತ್ತಿದ್ದ ಮಹಿಳೆ ಇಂದು ಮಾದಕ ವಸ್ತುಗಳ ಮಾರಾಟ ಜಾಲದ ರಾಣಿಯಾಗಿ ವಿಜೃಂಭಿಸಿದ್ದು ಮಾತ್ರ ರೋಚಕ ಘಟನೆ. ಶಶಿಕಲಾ ಪಟಾಣ್‌ಕರ್ ಅಲಿಯಾಸ್ ಬೇಬಿ ಎಂಬ 54 ವರ್ಷದ ಮಹಿಳೆಯ ದಿಢೀರ್ ಶ್ರೀಮಂತಿಕೆ ಇಂದು ಬಾಲಿವುಡ್ ಸಿನಿಮಾದ ಚಿತ್ರಕಥೆಯಾಗುವ ಮಟ್ಟಿಗೆ ಬೆಳೆದಿದ್ದು , ಎಲ್ಲರನ್ನು ಅಚ್ಚರಿಗೊಳಪಡಿಸಿದೆ. ಕಳೆದ 30 ವರ್ಷಗಳ ಹಿಂದೆ ಸಾಮಾನ್ಯ ಮಹಿಳೆಯಾಗಿದ್ದ ಶಶಿಕಲಾ ಇಂದು ಮುಂಬೈ ಮತ್ತು ಪುಣೆ ನಗರಗಳಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಹೊಂದಿದ್ದು 1.2 ಕೋಟಿ ರೂ.ಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡುವ ಮೂಲಕ ಪೊಲೀಸರನ್ನು ಬೇಸ್ತು ಬೀಳಿಸಿದ್ದಾಳೆ.

baby

ಪೊಲೀಸರ ಪ್ರಕಾರ ಮಾದಕ ದ್ರವ್ಯ ಮಾರಾಟ ಜಾಲದ ಮಹಾರಾಣಿಯಾಗಿ ಇಷ್ಟೆಲ್ಲ ಆಸ್ತಿ ಗಳಿಸಿರುವ ಶಶಿಕಲಾ ಇಂದು ಆರು ಲಕ್ಸ್ಯುರಿ ಅಪಾರ್‌್ಟಮೆಂಟ್‌ಗಳ ಒಡತಿಯಾಗಿದ್ದಾಳೆ. mಮುಂಬೈನ ಸುಪ್ರಸಿದ್ದ ಬೋರಿವಿಲಿಯಲ್ಲಿ ಎರಡು ಮನೆಗಳಿದ್ದು, ಈ ಪೈಕಿ ಒಂದು ಎರಡಂತಸ್ತಿನ ಕಟ್ಟಡವಾಗಿದ್ದರೆ ಪುಣೆಯಲ್ಲಿರುವ ಮತ್ತೊಂದು ಬಂಗಲೆ ಸುಮಾರು 9 ಎಕರೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾದಕ ವಸ್ತು ಮಾರಾಟ ಜಾಲದ ಹಿನ್ನೆಲೆಯಲ್ಲಿ ಶಶಿಕಲಾಳನ್ನು ಕಳೆದ ಏಪ್ರಿಲ್‌ನಲ್ಲಿ ಬಂಧಿಸಲಾಗಿದೆ. ಈಕೆಗೆ ಬೆಂಬಲ ನೀಡುತ್ತಿದ್ದ ಹೆಡ್‌ಕಾನ್‌ಸ್ಟೆಬಲ್ ಧರ್ಮರಾಜ್ ಕಲೋಕಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು , ಆರೋಪ ಎದುರಿಸುತ್ತಿದ್ದಾರೆ.

Write A Comment