ಮುಂಬೈ

ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡದ ಮದರಸಾಗಳಿಗೆ ಶಾಲೆಯ ಮಾನ್ಯತೆ ಇಲ್ಲ: ಸಚಿವ ಏಕನಾಥ್ ಖಡ್ಸೆ

Pinterest LinkedIn Tumblr

madrasa-newಮುಂಬಯಿ: ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡದ ಮದರಸಾಗಳಿಗೆ ಶಾಲೆಯ ಮಾನ್ಯತೆ ಇಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.

ಔಪಚಾರಿಕ ಶಿಕ್ಷಣದ ವಿಷಯಗಳಾದ ಇಂಗ್ಲಿಷ್, ಗಣಿತ, ವಿಜ್ಞಾನಗಳನ್ನು ಹೇಳಿಕೊಡದ ಮದರಸಾಗಳು ಶಾಲೆಗಳಲ್ಲ, ಅಂತಹ ಮದರಸಾಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳನ್ನು ಶಾಲೆಬಿಟ್ಟ ಮಕ್ಕಳೆಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.

ಮದರಸಾಗಳಲ್ಲಿ ಧಾರ್ಮಿಕ ವಿಷಯಗಳ ಸಂಬಂಧ ಶಿಕ್ಷಣ ನೀಡಲಾಗುತ್ತದೆ. ಭಾರತದ ಪ್ರತಿ ಮಗುವಿಗೂ ಔಪಚಾರಿಕ ಶಿಕ್ಷಣ ಪಡೆಯುವ ಹಕ್ಕು ಇದೆ., ಆದರೆ ಮದರಸಾಗಳು ಈ ಕೆಲಸ ಮಾಡುತ್ತಿಲ್ಲ. ಹೀಗಾಗಿ ಮದರಸಾಗಳಲ್ಲಿ ಪಡೆಯುವ ಶಿಕ್ಷಣಕ್ಕೆ ಮಾನ್ಯತೆ ಇಲ್ಲ ಎಂದು ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಏಕನಾಥ್ ಖಡ್ಸೆ ತಿಳಿಸಿದ್ದಾರೆ.

ಹಿಂದೂ ಅಥವಾ ಕ್ರಿಶ್ಟಿಯನ್ ಧರ್ಮಕ್ಕೆ ಸೇರಿದ ಮಕ್ಕಳು ಮದರಸಾಗಳಲ್ಲಿ ಕಲಿಯಲು ಬಯಸಿದರೆ ಅಂಥವರನ್ನು ಮದರಸಾಗಳಿಗೆ ಸೇರಿಸಿಕೊಳ್ಳಲ್ಲ. ಅದು ಧರ್ಮದ ಬಗ್ಗೆ ಕಲಿಸಿಕೊಂಡುವ ಒಂದು ಮೂಲ. ಹೀಗಾಗಿ ಮದರಸಾ ಶಾಲೆಯಲ್ಲ. ಮದರಸಾಗಳಲ್ಲಿ ಇತರ ವಿಷಯಗಳ ಬಗ್ಗೆ ಶಿಕ್ಷಣ ನೀಡುವಂತೆ ಅವರನ್ನು ಕೇಳಿದೆವು. ಆದರೆ ಬೇರೆ ವಿಷಯಗಳ ಬಗ್ಗೆ ಶಿಕ್ಷಣ ಕಲಿಸಲು ಮದರಾಸಗಳು ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಮದರಸಾಗಳನ್ನು ಶಾಲೆಗಳೆಂದು ಪರಿಗಣಿಸಲಾಗುವುದಿಲ್ಲ ಎಂದು ಸಚಿವ ಏಕನಾಥ್ ಖಡ್ಸೆ ವಿವರಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಎಷ್ಟು ಮಕ್ಕಳು ಔಪಚಾರಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬುದರ ಬಗ್ಗೆ ದುಲೈ 4 ರಿಂದ ಸಮೀಕ್ಷೆ ಆರಂಭಿಸಲು ಶಿಕ್ಷಣ ಇಲಾಖೆಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು,

Write A Comment