ಮುಂಬೈ

ಮೌನ ಮುರಿದ ಪಂಕಜ್ ಮುಂಡೆ; ಆರೋಪ ನಿಜವಾದರೆ ರಾಜಕೀಯ ನಿವೃತ್ತಿ

Pinterest LinkedIn Tumblr

pankaja munde

ಮುಂಬೈ, ಜು.2: ಸಾಮಗ್ರಿ ಖರೀದಿ ಗುತ್ತಿಗೆ ನೀಡುವಲ್ಲಿ ಅಕ್ರಮ ಎಸಗಿದ ಆರೋಪದಲ್ಲಿ ಸಿಲುಕಿ ಒದ್ದಾಡುತ್ತಿರುವ ಮಹಾರಾಷ್ಟ್ರ ಗ್ರಾಮೀಣಾಭಿವೃದ್ಧಿ ಮತ್ತು ಜಲ ಸಂರಕ್ಷಣೆ ಖಾತೆ ಸಚಿವೆ ಪಂಕಜ್ ಮುಂಡೆ ಕೊನೆಗೂ ಮೌನ ಮುರಿದಿದ್ದು, ತನ್ನ ವಿರುದ್ಧದ ಆರೋಪ ನಿಜವೇ ಆಗಿದ್ದರೆ, ರಾಜಕೀಯವನ್ನೇ ತೊರೆಯುವುದಾಗಿ ಹೇಳಿದ್ದಾರೆ.

ಡ್ಯಾಮ್ ನಿರ್ಮಾಣದ ಕೆಲ ಸಾಮಗ್ರಿಗಳ ಖರೀದಿಗೆ ಇ-ಟೆಂಡರ್ ಕರೆಯದೆ ತಮಗೆ ಬೇಕಾದ ಗುತ್ತಿಗೆದಾರನಿಗೆ 206 ಕೋಟಿ ರೂ. ಗುತ್ತಿಗೆ ನೀಡಿ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪದಲ್ಲಿ ಸಚಿವೆ ಪಂಕಜ್ ಮುಂಡೆ ಸಿಲುಕಿದ್ದಾರೆ. ರಾಜ್ಯದ ಜಲ್ನಾ ಜಿಲ್ಲೆಯಲ್ಲಿ ಅಣೆಕಟ್ಟೆಗಳ ನಿರ್ಮಾಣಕ್ಕಾಗಿ ಸಚಿವೆ ರತ್ನಾಕರ್ ಗುಟ್ಟೆ ಎಂಬ ಉದ್ಯಮಿಗೆ ಗುತ್ತಿಗೆ ನೀಡಿದ್ದಾರೆ.

ಇದು ನಂತರ ಬೆಳಕಿಗೆ ಬಂದಿತ್ತು. ಆದರೆ, ಈ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಸಚಿವೆ ಮುಂಡೆ, ನಾನು ಯಾವುದೇ ಯೋಜನೆಗಳ ಜಾರಿಯಲ್ಲೂ ಮಧ್ಯೆ ಪ್ರವೇಶ ಮಾಡಿಲ್ಲ. ಯಾರ ಬಗ್ಗೆಯೂ ಒಲವು ತೋರಿಸಿಲ್ಲ. ರತ್ನಾಕರ್ ಗುಟ್ಟೆ ನನಗೆ ಗೊತ್ತಿರುವವರು ಅಷ್ಟೇ. ಅವರೆಂದೂ ಈ ವಿಷಯದಲ್ಲಿ ನನ್ನನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಈ ಆರೋಪ ನಿಜವೇ ಆಗಿದ್ದರೆ, ನಾನು ರಾಜಕೀಯ ಜೀವನದಿಂದಲೇ ನಿವೃತ್ತಿ ಹೊಂದುತ್ತೇನೆ. ಈ ರಾಜಕೀಯ ಬಿಟ್ಟು ಬಿಡುತ್ತೇನೆ ಎಂದು ಹೇಳಿದ್ದಾರೆ.

Write A Comment