ಮುಂಬೈ

20 ಟನ್ ತೂಕ, 42 ಅಡಿ ಎತ್ತರ ನೀಲ ತಿಮಿಂಗಿಲ ಸಾವು

Pinterest LinkedIn Tumblr

Blue-whele

ಅಲಿಬಾಗ್, ಜೂ.26-ಸಧ್ಯಕ್ಕೆ ಈ ಭೂಮಿಯ ಮೇಲೆ ಬದುಕುತ್ತಿರುವ ಭಾರೀ ಗಾತ್ರದ ಸಸ್ತನಿ ಪ್ರಾಣಿಗಳಲ್ಲಿ ಒಂದಾದ ನೀಲ ತಿಮಿಂಗಿಲವೊಂದು ಇಂದು ಬೆಳಗ್ಗೆ ಮಹಾರಾಷ್ಟ್ರದ ಅಲಿಬಾಗ್‌ನ ರೇವ್‌ದಂಡ ಕಡಲ ತೀರದಲ್ಲಿ ಮೃತಪಟ್ಟಿದೆ. ತೆರೆಗಳ ಮೂಲಕ ದಂಡೆಗೆ ಸೇರಿದ್ದ ತೀವ್ರ ಗಾಯಗೊಂಡ ಈ ತಿಮಿಂಗಿಲ,

ತೀರದ ಮರಳರಾಶಿಯ ಮೇಲೆ ಹಾಗೇ ಸಾವನ್ನಪ್ಪಿದೆ. ಈ ನೀಲ ತಿಮಿಂಗಿಲ 42 ಅಡಿ ಉದ್ದವಿದ್ದು, ಬರೋಬ್ಬರಿ 20 ಟನ್ ತೂಕವಿದೆ. ರೇವ್‌ದಂಡ್ ತೀರದಲ್ಲಿ ಗಾಯಗೊಂಡು ಬಿದ್ದಿದ್ದ ತಿಮಿಂಗಿಲ ನೋಡಿದ ಮೀನುಗಾರರು ಅಲಿಬಾಗ್ ಜಿಲ್ಲಾಡಳಿತಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಜಿಲ್ಲಾಡಳಿತ ಜೆಸಿಬಿಗಳನ್ನು ತಂದು ಅದನ್ನು ಸಮುದ್ರದ ನೀರೊಳಕ್ಕೆ ತಳ್ಳುವ ಪ್ರಯತ್ನ ಮಾಡಿತು. ಆದರೆ ಪ್ರಯೋಜನವಾಗಲಿಲ್ಲ. ಭಾರೀ ತೂಕದ ಅದನ್ನು ಏನು ಮಾಡಲೂ ಸಾಧ್ಯವಾಗಲಿಲ್ಲ. ಕೊನೆಗೆ ಅದು ಅಲ್ಲೇ ಕೊನೆಯುಸಿರೆಳೆಯಿತು ಎಂದು ಜಿಲ್ಲಾಧಿಕಾರಿ ದೀಪಕ್ ಕ್ಷೀರಸಾಗರ್ ಹೇಳಿದ್ದಾರೆ. ಅರಬ್ಬಿ ಸಮುದ್ರದಲ್ಲಿ 20 ಜಾತಿಯ ತಿಮಿಂಗಿಲಗಳಿವೆ. ಕಳೆದ ತಿಂಗಳೂ ಕೂಡ ಇಂಥದೇ ಒಂದು ತಿಮಿಂಗಿಲ ಉರಾನ್ ಕರಾವಳಿಯಲ್ಲಿ ಸತ್ತುಹೋಗಿತ್ತು. ಈಗ್ಗೆ 2 ವರ್ಷಗಳ ಹಿಂದೆ ದೀವಿಯಾಘರ್ ತೀರದಲ್ಲಿಯೂ ತಿಮಿಂಗಿಲವೊಂದು ಸತ್ತುಬಿದ್ದಿತ್ತು.

Write A Comment