ಮುಂಬೈ

ಸಲಿಂಗಿಗೆ ‘ವರ’ ನಾಗಲು ಹರಿದು ಬಂದವು 100ಕ್ಕೂ ಅಧಿಕ ‘ಮೇಲ್’ ಗಳು

Pinterest LinkedIn Tumblr

760enhanced-32064-1432018400-20

ಮುಂಬೈ: ತಮ್ಮ ಸಲಿಂಗಿ ಪುತ್ರನಿಗೆ ಸೂಕ್ತ ವರ ಬೇಕೆಂದು ಮಹಿಳೆಯೊಬ್ಬರು ನೀಡಿದ ಪತ್ರಿಕಾ ಜಾಹೀರಾತಿಗೆ ಸ್ಪಂದನೆ ಸಿಕ್ಕಿದ್ದು, ವಿವಾಹವಾಗಲು ಸಿದ್ದ ಎಂದು ದೇಶ, ವಿದೇಶಗಳ ‘ವರ’ ರು ತಮ್ಮ ಬಯೋಡಾಟಾ ಕಳುಹಿಸಿದ್ದಾರೆ.

ಪದ್ಮಾ ಐಯ್ಯರ್ ಎಂಬವರು ತಮ್ಮ 36 ವರ್ಷದ ಸಲಿಂಗಿ ಪುತ್ರ ಹರೀಶ್ ಐಯ್ಯರ್ ಗಾಗಿ ವರನ ತಲಾಷೆಯಲ್ಲಿದ್ದರು. ಆದರೆ ಸೂಕ್ತ ವರ ದೊರೆಯದ ಹಿನ್ನೆಲೆಯಲ್ಲಿ ಪತ್ರಿಕೆಯೊಂದಕ್ಕೆ ಜಾಹೀರಾತು ನೀಡಿದ್ದು, ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಭಾರತದಲ್ಲಿ ಸಲಿಂಗ ಕಾಮ ಕಾನೂನಿಗೆ ವಿರುದ್ದ ಎಂಬ ಕಾರಣಕ್ಕೆ ಈ ಜಾಹೀರಾತು ಪ್ರಕಟಿಸಲು ಹಲವು ಪತ್ರಿಕೆಗಳೂ ಹಿಂದೇಟು ಹಾಕಿದ್ದವು.

ಕೊನೆಗೂ ಅಂಗ್ಲ ಪತ್ರಿಕೆಯೊಂದು ಈ ಜಾಹೀರಾತು ಪ್ರಕಟಿಸಿದ್ದು ಇದಕ್ಕೆ ಪ್ರತಿಕ್ರಿಯೆಯಾಗಿ 150 ಕ್ಕೂ ಅಧಿಕ ಇ ಮೇಲ್ ಬಂದಿದೆ ಎನ್ನಲಾಗಿದೆ. ಕೇವಲ ಭಾರತ ಮಾತ್ರವಲ್ಲದೇ ಅಮೆರಿಕಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಿಂದಲೂ ಹಲವು ವರರು ವಿವಾಹವಾಗುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆನ್ನಲಾಗಿದೆ. ಕೆಲವರು ತಾಯಿ- ಮಗನನ್ನು ತೀವ್ರವಾಗಿ ಖಂಡಿಸಿದ್ದು, ಭಾರತೀಯ ಸಂಸ್ಕೃತಿಯನ್ನು ಹಾಳುಗೆಡುವುತ್ತಿದ್ದಿರೆಂದು ಕೆಲ ಇ ಮೇಲ್ ಗಳಲ್ಲಿ ಆರೋಪಿಸಿದ್ದಾರೆನ್ನಲಾಗಿದೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ತಾಯಿ- ಮಗ ಈಗ ಸೂಕ್ತ ವರನ ಆಯ್ಕೆಯಲ್ಲಿ ತೊಡಗಿದ್ದಾರೆ.

Write A Comment