ಮುಂಬೈ

ಉಗ್ರ ಅಫ್ಜಲ್ ಗುರು ಗಲ್ಲಿನ ಹಿಂದೆ ರಾಜಕೀಯ ದುರುದ್ದೇಶವಿರಲಿಲ್ಲ: ಶಿಂಧೆ

Pinterest LinkedIn Tumblr

Sushilkumar-Shinde

ಮುಂಬೈ: 2001ರಲ್ಲಿ ಸಂಸತ್ ಮೇಲೆ ದಾಳಿ ನಡೆಸಿದ್ದ ಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿರುವುದರ ಹಿಂದೆ ರಾಜಕೀಯ ದುರುದ್ದೇಶ ಅಡಗಿತ್ತು ಎಂಬ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆರೋಪವನ್ನು ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ತಳ್ಳಿಹಾಕಿದ್ದಾರೆ.

ಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿರುವುದರ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲು ಆದೇಶ ನೀಡಿತ್ತು. ಸುಪ್ರೀಂನ ಅಣತಿಯಂತೆ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲಾಗಿದೆ. ಮರಣದಂಡನೆ ಕುರಿತಂತೆ ಅಫ್ಜಲ್ ಗುರು ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಸಹ ತಿರಸ್ಕೃತಗೊಂಡಿತ್ತು. ಈ ಎಲ್ಲಾ ಬೆಳವಣಿಗೆಗಳ ನಂತರ ಆತನನ್ನು ಗಲ್ಲಿಗೇರಿಸಲಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.

ಸಂಸತ್ ಮೇಲೆ ದಾಳಿ ನಡೆಸಿದ ಉಗ್ರ ಅಫ್ಜಲ್ ಗುರುವನ್ನು ಯುಪಿಎ ಸರ್ಕಾರ ರಾಜಕೀಯ ದುರುದ್ದೇಶದಿಂದ ಗಲ್ಲಿಗೇರಿಸಿತು ಎಂದು ಒಮರ್ ಅಬ್ದುಲ್ಲಾ ದೂರಿದ್ದರು. ಲೋಕಸಭೆ ಚುನಾವಣೆ ಎದುರಿಸಲು ಮತ್ತು ಬಿಜೆಪಿಯ ಆರೋಪವನ್ನು ಸುಳ್ಳು ಮಾಡುವ ಸಲುವಾಗಿ ಕಾಂಗ್ರೆಸ್ ರಾಜಕೀಯ ಕಾರಣಗಳಿಗಾಗಿ ಅಫ್ಜಲ್ ಗುರು ಗಲ್ಲಿಗೇರಿಸಿತ್ತು ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಉಗ್ರ ಅಫ್ಜಲ್ ಗುರುವನ್ನು 2013ರ ಫೆಬ್ರವರಿ 9 ರಂದು ದೆಹಲಿಯ ತಿಹಾರ್ ಜೈಲಿನಲ್ಲಿ ಬೆಳಗ್ಗೆ 8 ಸುಮಾರಿಗೆ ಗಲ್ಲಿಗೇರಿಸಲಾಗಿತ್ತು.

Write A Comment