ಮುಂಬೈ

ಬಹಿರಂಗವಾಯ್ತು ಬಾಲಿವುಡ್ ನಟಿಯ ಆತ್ಮಹತ್ಯೆ ವಿಡಿಯೋ

Pinterest LinkedIn Tumblr

1967Y18MAYL007ಮುಂಬೈ: ಬಾಲಿವುಡ್ ನಟಿ ಹಾಗೂ ರೂಪದರ್ಶಿ ಶಿಖಾ ಜೋಷಿ ಚಾಕುವಿನಿಂದ ತನ್ನ ಕತ್ತು ಸೀಳಿಕೊಳ್ಳುತ್ತಿರುವ ವೇಳೆ ಇದನ್ನು ನೋಡಿದ ಸ್ನೇಹಿತೆ ಆಕೆಯನ್ನು ರಕ್ಷಿಸುವ ಪ್ರಯತ್ನ ಮಾಡುವುದನ್ನು ಬಿಟ್ಟು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ.

ಶಿಖಾ ಜೋಷಿ ವಾಸವಿದ್ದ ಮುಂಬೈನ ವರ್ಸೋವಾ ಫ್ಲಾಟಿನಲ್ಲಿದ್ದ ಆಕೆಯೊಂದಿಗೆ ವಾಸವಿದ್ದ ಮಧು ಭಾರತಿ ಎಂಬಾಕೆ ಶಿಖಾ ಜೋಷಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವುದನ್ನು ಗಮನಿಸಿದ್ದಾಳೆ. ಆದರೆ ಆಕೆ ಸತ್ತರೆ ತನಿಖೆ ವೇಳೆ ತನಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಮುಂಜಾಗರೂಕತೆಯಿಂದ ತನ್ನ ಮೊಬೈಲಿನಲ್ಲಿ ಈ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ. ಈ ದೃಶ್ಯಾವಳಿ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು ಮಧು ಭಾರತಿಯ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಆತ್ಮಹತ್ಯೆ ದೃಶ್ಯವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ಮಧು ಭಾರತಿ, ಶಿಖಾ ಜೋಷಿ ಕತ್ತು ಕೊಯ್ದುಕೊಂಡ ವೇಳೆ ರಕ್ತಸ್ರಾವ ನಿಲ್ಲಿಸಲು ಟವೆಲ್ ಕಟ್ಟಿಕೊಳ್ಳುವಂತೆ ಆಕೆಗೆ ಸಲಹೆ ನೀಡಿದ್ದಾಳೆ ಹೊರತು ಅಂತಹ ಪರಿಸ್ಥಿತಿಯಲ್ಲೂ ರೆಕಾರ್ಡ್ ಮಾಡಿಕೊಳ್ಳುವುದನ್ನು ನಿಲ್ಲಿಸಿಲ್ಲ. ಸಾವಿಗೂ ಮುನ್ನ ಶಿಖಾ ಜೋಷಿ ತನಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳ ಹೆಸರನ್ನು ಹೇಳಿದ್ದು, ಇವರುಗಳೇ ತನ್ನ ಸಾವಿಗೆ ಕಾರಣವೆಂದು ತಿಳಿಸಿದ್ದಾರೆ. ಅಲ್ಲದೇ ಬಾಲಿವುಡ್ ನ ‘ಬಿಎ ಪಾಸ್’ ಎಂಬ ಒಂದು ಚಿತ್ರದಲ್ಲಿ ನಟಿಸಿದ್ದ ಶಿಖಾ ಜೋಷಿಗೆ ಮಾಡೆಲಿಂಗ್ ಕ್ಷೇತ್ರದಲ್ಲೂ ಅವಕಾಶ ಇರಲಿಲ್ಲವೆಂದು ಹೇಳಲಾಗಿದೆ. ಈ ಎಲ್ಲಾ ಕಾರಣಗಳಿಂದ ಶಿಖಾ ಜೋಷಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆಂಬ ಮಾತುಗಳು ಕೇಳಿ ಬರುತ್ತಿವೆ.

Write A Comment