ಕನ್ನಡ ವಾರ್ತೆಗಳು

ಕುಂದಾಪುರದ ವಿದ್ಯಾರ್ಥಿನಿ ನಮೃತಾ ಜಿ. ನಾಯ್ಕ್ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ; ಈಕೆಗೆ ಆಸ್ಟ್ರೋಫಿಸಿಕ್ಸ್‌ನಲ್ಲಿ ಸಂಶೋಧಕಿಯಾಗುವ ಹಂಬಲ

Pinterest LinkedIn Tumblr

UDP_PUC_Topper Namratha

ಕುಂದಾಪುರ: ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧೀನಕ್ಕೊಳಪಟ್ಟ ಆರ್.ಎನ್.ಶೆಟ್ಟಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನಮೃತಾ ಜಿ, ನಾಯ್ಕ್ 592 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮಾ ಸ್ಥಾನಿಯಾಗಿದ್ದಾರೆ.

ಕುಂದಾಪುರದ ಚಿಕ್ಕನ್‌ಸಾಲ್ ರಸ್ತೆ ನಿವಾಸಿಯಾಗಿರುವ ಗಣಪತಿ ಬಿ ನಾಯ್ಕ್ ಹಾಗೂ ಗಾಯತ್ರಿ ಜಿ. ನಾಯ್ಕ್ ಅವರ ಇಬ್ಬರು ಮಕ್ಕಳಲ್ಲಿ ನಮೃತಾ ಮೊದಲಗಿಳು. ತನ್ನ ಹತ್ತನೇ ತರಗತಿವರೆಗಿನ ವಿದ್ಯಾಭ್ಯಾಸವನ್ನು ಬೇರೆ ಕಡೆಗಳಲ್ಲಿ ಮುಗಿಸಿದ್ದ ನಮೃತಾ ಪಿಯು ವಿದ್ಯಾಭ್ಯಾಸವನ್ನು ತನ್ನ ಅಜ್ಜಿಯ ಜೊತೆಗೆ ಕುಂದಾಪುರದಲ್ಲಿ ಮುಗಿಸಿದ್ದಾಳೆ. ತನ್ನೆಲ್ಲಾ ಸಾಧನೆಗೆ ಅಜ್ಜಿಯ ಪ್ರೋತ್ಸಾಹ ಮತ್ತು ಬೆಂಬಲವೇ ಕಾರಣ ಎಂದು ಹೇಳುವ ನಮೃತಾ ಏರೋನಾಟಿಕಲ್ ಇಂಜಿನಿಯರಿಂಗ್ ಮಾಡುವ ಮತ್ತು ಆಸ್ಟ್ರೋ ಫಿಸಿಕ್ಸ್‌ನಲ್ಲಿ ಸಂಶೋಧನೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾಳೆ.

UDP_PUC_Topper Namratha (1)

ಕಷ್ಟಪಟ್ಟು ಓದಿದ್ದೇನೆ. ಯಾವುದೇ ಸಂದರ್ಭದಲ್ಲಿ ಪರೀಕ್ಷೆ ಹಾಗೂ ಪಠ್ಯಾಭ್ಯಾಸವನ್ನು ಕಡೆಗಣಿಸಿಲ್ಲ. ಹಾಗಾಗಿ ಇಷ್ಟು ಅಂಕ ಗಳಿಸಲು ಸಾಧ್ಯವಾಗಿದೆ ಎಂದು ಹೇಳುವ ನಮೃತಾ, ಮನೆಯವರು ವಾಸವಿರುವುದು ಗೋವಾದಲ್ಲಿ. ಅಜ್ಜಿಯೊಂದಿಗೆ ದಿನಚರಿ, ಅಭ್ಯಾಸಗಳ ಜೊತೆಗೆ ಪರೀಕ್ಷೆಯಲ್ಲಿ ಅಂಕಗಳಿಸಿದ ನಮೃತಾ ಮನೆಯವರಿಗೆ ಆಕೆಯನ್ನು ಮೆಡಿಕಲ್ ಓದಿಸುವ ಆಸೆ.

ಮನೆಯಲ್ಲಿ ಸಹಿ ಹಂಚಿ ಸಂಭ್ರಮ: ರಾಜ್ಯಕ್ಕೇ ದ್ವಿತೀಯ ಬಂದ ಸುದ್ಧಿ ಕೇಳಿದ ತಕ್ಷಣ ಸಂಬಂಧಿಕರು ನಮೃತಾ ಮನೆಗೆ ಓಡಿ ಬಂದು ಶುಭ ಹಾರೈಸಿದ್ದಾರೆ. ಮನೆಗೆ ಬಂದವರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಸುದ್ಧಿ ತಿಳಿದ ತಕ್ಷಣ ಗೋವಾದಲ್ಲಿ ಕ್ರೋಂಪ್ಟನ್ ಗ್ರೂಪ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ತಂದೆ ಮನೆಗೆ ತೆರಳಿದ್ದಾರೆ. ದೂರವಾಣಿಯಲ್ಲಿ ಮಾತನಾಡಿದ ಅವರು ಮಗಳ ಇಷ್ಟದಂತೆ ಓದಿಸುವುದಾಗಿ ತಿಳಿಸಿದ್ದಾರೆ.

Write A Comment