ಮುಂಬೈ

ಸಾಯಿಬಾಬಾ ಸನ್ನಿಧಿಯಲ್ಲೂ ಅವ್ಯವಹಾರ : ಶಿರಡಿ ಸಂಸ್ಥಾನಕ್ಕೆ ನೋಟಿಸ್ ಜಾರಿ

Pinterest LinkedIn Tumblr

Shiradi-Sai

ಮುಂಬೈ, ಮೇ 14- ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರದಲ್ಲಿ ಇಬ್ಬರು ವೈದ್ಯರು ಶಾಮೀಲಾಗಿರುವ ಹಿನ್ನೆಲೆಯಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಶಿರಡಿಯಲ್ಲಿರುವ ಸಾಯಿಬಾಬಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಹೃದಯರೋಗ ತಜ್ಞರು ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಲು ಅನುವು ಮಾಡಿಕೊಡುವಂತೆ ಸಾಮಾಜಿಕ ಕಾರ್ಯಕರ್ತ ಸಂಜಯ್ ಕಾಳೆ ನ್ಯಾಯಾಲಯದ ಮೊರೆ ಹೋಗಿದ್ದರು.

ಪೊಲೀಸರ ವಾದ ಆಲಿಸಿದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಇಂದಿರಾ ಜೈನ್ ಮತ್ತು ಟಿ.ಎಲ್.ನಲವಾಡೆ ಅವರಿದ್ದ ವಿಭಾಗೀಯ ಪೀಠ ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್  ಅಹಮದಾನಗರ್ ಎಸ್‌ಪಿ ಹಾಗೂ ಶಿರಡಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.  ಕಡು ಬಡವರು ಮತ್ತು ಕೈಲಾಗದವರಿಗೆ ಮೀಸಲಿಡಬೇಕಾದ ಔಷಧಿಗಳನ್ನು ಇಬ್ಬರು ಆರೋಪಿತ ವೈದ್ಯರು ದುರ್ಬಳಕೆ ಮಾಡಿಕೊಂಡಿರುವುದೇ ಅಲ್ಲದೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲೂ ಅವ್ಯವಹಾರ ನಡೆಸಿದ್ದಾರೆ ಎಂದು ಕಾಳೆ ಆರೋಪಿಸಿದ್ದರು. ಇಡೀ ದೇಶದಲ್ಲಿ ಬಡವರಿಗೆ  ಉಚಿತ ವೈದ್ಯಕೀಯ ಸೇವೆ ನೀಡುವಲ್ಲಿ ಶಿರಡಿ ಸಂಸ್ಥಾನ ಮುಂಚೂಣಿಯಲ್ಲಿದೆ ಎಂಬ ಖ್ಯಾತಿಗೆ ಕಪ್ಪುಚುಕ್ಕೆ ಬಳಿದಂತಾಗಿದೆ.

Write A Comment