ಮುಂಬೈ

ಭಾರತೀಯರ ಚಿನ್ನದ ವ್ಯಾಮೋಹ ಶೇ.15ರಷ್ಟು ಏರಿಕೆ..!

Pinterest LinkedIn Tumblr

Gold-price

ಮುಂಬೈ, ಮೇ 14- ಬೆಲೆ ಏರಿಕೆಯ ಚಿಂತೆಯಿಲ್ಲ, ಹಬ್ಬ ಹರಿದಿನಗಳೇ ಬೇಕಾಗಿಲ್ಲ, ಯಾವುದೇ ಸಮಯ, ಸಂದರ್ಭಗಳನ್ನೂ ಲೆಕ್ಕಿಸದೆ ಭಾರತೀಯರು  ಚಿನ್ನದ ಮೇಲಿನ ಮೋಹವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಕಳೆದ ತ್ರೈಮಾಸಿಕದಲ್ಲಿ ಒಟ್ಟಾರೆ ಬೇಡಿಕೆ ಪ್ರಮಾಣ ಶೇ.15ರಷ್ಟು ಹೆಚ್ಚಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಹೇಳಿದೆ. ಜನವರಿಯಿಂದ ಮಾರ್ಚ್‌ವರೆಗೆ ಹಬ್ಬ ಹರಿದಿನಗಳು, ವಿಶೇಷ ಸಂದರ್ಭಗಳು ಹೆಚ್ಚಾಗಿಲ್ಲದಿದ್ದರೂ ಸಹ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 191.17ಟನ್ ಚಿನ್ನ ಮಾರಾಟವಾಗಿದೆ.

ಈ ಅವಧಿಯಲ್ಲಿ ಚಿನ್ನದ ಬೇಡಿಕೆ ಕೂಡ ಹೆಚ್ಚಾಗಿದ್ದು, ಸುಮಾರು 46,730 ಕೋಟಿಯನ್ನು ಇದರಲ್ಲಿ ವಿನಿಯೋಗಿಸಲಾಗಿದೆ. ಚಿನ್ನ ಖರೀದಿಗೂ ಕೂಡ ಒಳ್ಳೆಯ ವಾತಾವರಣ ಸೃಷ್ಟಿಸಲಾಗಿತ್ತು. ಹೊಸ ಕೊಡುಗೆಗಳು ಮತ್ತು ಸವಲತ್ತುಗಳು ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸಿತ್ತು ಎಂದು Uಎಇ ಹೇಳಿದೆ.

ಕಳೆದ ಹಲವು ತಿಂಗಳಿನಿಂದ ಮತ್ತೆ ಚಿನ್ನ ಚೇತರಿಸಿಕೊಂಡು ಹಳೆ ಹಿರಿಮೆಯತ್ತ ಸಾಗಿಸುತ್ತಿದೆ. ಕಳೆದ ಸಾಲಿನಲ್ಲಿ ಆರ್ಥಿಕತೆ ದುರ್ಬಲ, ಸಾರ್ವಜನಿಕ ಚುನಾವಣೆಗಳು ಇದ್ದ ಕಾರಣ ಚಿನ್ನದ ಬೆಲೆ ಇಳಿದಿತ್ತು. ಆದರೆ, ಭವಿಷ್ಯ ಉಜ್ವಲವಾಗಿದೆ ಎಂದು ಭಾರತದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸೋಮಸುಂದರಂ ಸಂತಸ ವ್ಯಕ್ತಪಡಿಸಿದ್ದಾರೆ. ಜಿಡಿಪಿ ವೃದ್ದಿಯೂ ಕೂಡ ಸಹಕಾರಿಯಾಗಿದ್ದು, ಮಾರುಕಟ್ಟೆಯಲ್ಲಿ ಪ್ರತಿದಿನ ಉತ್ತಮ ಸ್ಪಂದನೆ ಸಿಗುತ್ತಿದೆ.  ಪ್ರಮುಖವಾಗಿ ಹೂಡಿಕೆ ಮತ್ತು ಸಂಗ್ರಹಕ್ಕಾಗಿ ಚಿನ್ನ ಖರೀದಿ ನಡೆದಿದ್ದರೆ, ಇನ್ನು ಆಭರಣಕ್ಕೂ ಕೂಡ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಎಂದು ಹೇಳಿದ್ದಾರೆ. ಈ ವರ್ಷದಲ್ಲಿ  ಒಟ್ಟಾರೆ 900ರಿಂದ 1000 ಟನ್ ಚಿನ್ನ ವಹಿವಾಟಿನ ನಿರೀಕ್ಷೆ ಇದೆ ಎಂದು  ಸೋಮಸುಂದರಂ ತಿಳಿಸಿದ್ದಾರೆ.

Write A Comment