ಮನೋರಂಜನೆ

ಸಲ್ಮಾನ್ ಅಪಘಾತ ಪ್ರಕರಣ: ಆ ರಾತ್ರಿ ನಡೆದದ್ದೇನು..?

Pinterest LinkedIn Tumblr

run

2002 ಸೆಪ್ಟೆಂಬರ್ 28 ರಂದು ಪಾನಮತ್ತರಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಐಷಾರಾಮಿ ಕಾರು ಹರಿಸಿ ಒಬ್ಬನ ಸಾವಿಗೆ ಹಾಗೂ ನಾಲ್ವರು ಗಾಯಗೊಳ್ಳಲು ಕಾರಣರಾಗುವ ಮೂಲಕ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿದ್ದಾರೆ. ಅಷ್ಟಕ್ಕೂ ಅಂದು ರಾತ್ರಿ ನಡೆದದ್ದೇನು ಎಂಬುದರ ವಿವರ ಇಲ್ಲಿದೆ ನೋಡಿ.

1) 2002 ಸೆಪ್ಟೆಂಬರ್ 27 ರ ರಾತ್ರಿ 11-00 ಗಂಟೆ ಸುಮಾರಿಗೆ ನಟ ಸಲ್ಮಾನ್ ಖಾನ್, ಬಾಲಿವುಡ್ ಗಾಯಕ ಕಮಲ್ ಖಾನ್ ಮತ್ತಿತರ ಸ್ನೇಹಿತರು ಮುಂಬೈನ ಜುಹು ಪ್ರದೇಶದಲ್ಲಿರುವ ‘ರೈನ್ ಬಾರ್’ ನಲ್ಲಿ ಮೊದಲೇ ಕುಳಿತಿದ್ದ ಸಲ್ಮಾನ್ ಸಹೋದರ ಸೋಹೆಲ್ ಖಾನ್ ಜೊತೆ ಸೇರುತ್ತಾರೆ. ಸ್ಥಳಾವಕಾಶದ ಕೊರತೆ ಇದ್ದ ಕಾರಣ ಇವರೆಲ್ಲರೂ ಬಾರ್ ಕೌಂಟರಿನಲ್ಲಿಯೇ ಕುಳಿತಿದ್ದು, ಸಲ್ಮಾನ್ ಬಕಾರ್ಡಿ ರಮ್ ತೆಗೆದುಕೊಂಡರೆ ಮಿಕ್ಕವರು ವೈನ್ ಹಾಗೂ ಬೀರ್ ಆರ್ಡರ್ ಮಾಡುತ್ತಾರೆ.

2) 1-00 ಗಂಟೆ ಸುಮಾರಿಗೆ ಇವರೆಲ್ಲರೂ ‘ರೈನ್ ಬಾರ್’ ನಿಂದ ಹೊರ ಬರುತ್ತಾರೆ. ಇವರ ಒಟ್ಟು ಬಿಲ್ 10 ಸಾವಿರ ರೂ.ಗಳಾಗಿರುತ್ತದೆ. ‘ರೈನ್ ಬಾರ್’ ಮ್ಯಾನೇಜರ್ ರಿಜ್ವಾನ್, ಸಲ್ಮಾನ್ ಖಾನ್ ರ ಲ್ಯಾಂಡ್ ಕ್ರೂಸರ್ ಕಾರಿನವರೆಗೂ ಬಂದು ಇವರುಗಳನ್ನು ಬೀಳ್ಕೊಡುತ್ತಾರೆ. ಅಲ್ಲಿಂದ ಮತ್ತೆ ಜೆಡಬ್ಲು ಮಾರಿಯಟ್ ನಲ್ಲಿರುವ ಎನಿಗ್ಮಾಕ್ಕೆ ಸಲ್ಮಾನ್ ತೆರಳುತ್ತಾರೆ. ಇವರೊಂದಿಗೆ ಪೊಲೀಸ್ ಪೇದೆ ರವೀಂದ್ರ ಪಾಟೀಲ್ ಸಹ ಅಂಗರಕ್ಷಕರಾಗಿ ಇರುತ್ತಾರೆ.

3) ಅಲ್ಲಿ ಮತ್ತೆ ಮದ್ಯ ಸೇವಿಸಿದ ಸಲ್ಮಾನ್ ಬೆಳಗಿನ ಜಾವ 2-15 ಕ್ಕೆ ಎನಿಗ್ಮಾದಿಂದ ಹೊರ ಬರುತ್ತಾರೆ. ಪಾರ್ಕಿಂಗ್ ಪ್ಲೇಸ್ ನಲ್ಲಿದ್ದ ತಮ್ಮ ಕಾರಿನ ಬಳಿ ಬಂದ ಸಲ್ಮಾನ್ ಖಾನ್ ಅವರಿಗೆ ಪಾರ್ಕಿಂಗ್ ನಿರ್ವಾಹಕ ಕಲ್ಪೇಶ್ ವರ್ಮಾ ಕಾರಿನ ಕೀ ನೀಡುತ್ತಾರೆ. ಅವರಿಗೆ ಸಲ್ಮಾನ್ 500 ರೂ. ಟಿಪ್ಸ್ ನೀಡುತ್ತಾರೆ. ಚಾಲಕನ ಸ್ಥಾನದಲ್ಲಿ ಸಲ್ಮಾನ್ ಖಾನ್ ಅವರೇ ಕುಳಿತುಕೊಳ್ಳುತ್ತಾರೆ. ಬೇಡವೆಂದು ಜೊತೆಯಲ್ಲಿದ್ದವರು ಹೇಳಿದರೂ ಸಲ್ಮಾನ್ ಖಾನ್ ಕೇಳುವುದಿಲ್ಲ. ಅಲ್ಲಿಂದ 12 ಕಿ.ಮೀ. ದೂರದಲ್ಲಿದ್ದ ತಮ್ಮ ಗ್ಯಾಲಕ್ಸಿ ಅಪಾರ್ಟ್ಮೆಂಟಿಗೆ ಸಲ್ಮಾನ್ ಹೋಗುವ ವೇಳೆ ನಿಯಂತ್ರಣ ತಪ್ಪಿದ ಕಾರು ಬಾಂದ್ರಾದ ಬೇಕರಿಗೆ ನುಗ್ಗಿದ ಪರಿಣಾಮ ಒಬ್ಬ ಮೃತಪಟ್ಟು ನಾಲ್ವರು ಗಾಯಗೊಳ್ಳುತ್ತಾರೆ.

Write A Comment