ರಾಷ್ಟ್ರೀಯ

ಅಶ್ಲೀಲ ವಿಡಿಯೋ ಮಾಡಿದ್ದ ಕಾಮುಕ ಪತಿಯನ್ನು ಹಿಡಿದುಕೊಟ್ಟ ಪತ್ನಿ

Pinterest LinkedIn Tumblr

8788povucmu60w

ಹೈದರಾಬಾದ್: ಹೆಸರಾಂತ ಔಷಧ ಕಂಪನಿಯೊಂದರಲ್ಲಿ ವಿಜ್ಞಾನಿಯಾಗಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನು ವಂಚಿಸಿ ಹಲವು ಮಹಿಳೆಯರೊಂದಿಗೆ ಸಂಬಂಧವಿಟ್ಟುಕೊಂಡು ಅವರ ಅಶ್ಲೀಲ ವಿಡಿಯೋ ಮಾಡಿದ್ದು, ಈಗ ಪತ್ನಿಯೇ ಆತನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾಳೆ.

ಹೈದರಾಬಾದಿನ ಈಸ್ಟ್ ಮಾರೇಡ್ ಪಲ್ಲಿಯ ನಿವಾಸಿ ಶ್ರೀಕಾಂತ್ ಎಂಬಾತ ತನ್ನ ಪತ್ನಿ ಮಾಧವಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದ. ಈತನ ರಸಿಕ ಗುಣಗಳ ಪರಿಚಯವಿದ್ದ ಪತ್ನಿ ಮಾಧವಿ ಆತನ ಮೇಲೆ ನಿಗಾ ಇರಿಸಿದ್ದಳು.

ಇತ್ತೀಚೆಗೆ ಆತ ಮಹಿಳೆಯೊಬ್ಬಳೊಂದಿಗಿರುವ ವೇಳೆ ಆತನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದು, ಈತನ ಮೊಬೈಲ್ ನಲ್ಲಿ ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ವಿಡಿಯೋ ಹಾಗೂ ಫೋಟೋಗಳು ಇದ್ದವೆಂದು ಹೇಳಲಾಗಿದೆ. ಮದುವೆಯ ಆಮಿಷವೊಡ್ಡಿ ಮಹಿಳೆಯರನ್ನು ತನ್ನ ಬಲೆಗೆ ಕೆಡವಿಕೊಳ್ಳುತ್ತಿದ್ದ ಈ ವಿಜ್ಞಾನಿ ಅವರೊಂದಿಗೆ ದೈಹಿಕ ಸಂಬಂಧ ಬೆಳೆಸಿ ಅದರ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡು ಬಳಿಕ ಬ್ಲಾಕ್ ಮೇಲ್ ಮಾಡುತ್ತಿದ್ದನೆನ್ನಲಾಗಿದೆ. ಇದೀಗ ಈತನ ಪತ್ನಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ತುಕಾರಾಂ ಗೇಟ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Write A Comment