ರಾಷ್ಟ್ರೀಯ

ಸಲ್ಮಾನ್ ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಶಿಕ್ಷೆ ಎಂದ ಸಮಾಜವಾದಿ ಮುಖಂಡ!

Pinterest LinkedIn Tumblr

4395naresh-agarwal_350_111313062535

2002 ರಲ್ಲಿನ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಜೈಲುಪಾಲಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಅಲ್ಪಸಂಖ್ಯಾತ ವರ್ಗದವರೆಂಬ ಕಾರಣಕ್ಕೆ ಶಿಕ್ಷೆಯಾಗಿದೆ ಎಂದು ಸಮಾಜವಾದಿ ನಾಯಕ ನರೇಶ್ ಅಗರವಾಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಲ್ಮಾನ್ ಖಾನ್ ಅವರಿಗೆ ಶಿಕ್ಷೆಯಾಗಿರುವ ಬಗೆಗೆ ಮಾತನಾಡಿರುವ ನರೇಶ್ ಅಗರವಾಲ್ ಈ ತೀರ್ಪಿನಿಂದ ತಮಗೆ ನೋವಾಗಿದ್ದು ಅವರೊಬ್ಬ ಪ್ರಖ್ಯಾತ ಸ್ಟಾರ್. ದೇಶಾದ್ಯಂತ ಅವರಿಗೆ  ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಆದರೆ ಅದೆಲ್ಲವನ್ನು ಮರೆತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೆಂಬ ಕಾರಣಕ್ಕೆ ಅವರಿಗೆ ಈ ಶಿಕ್ಷೆ ನೀಡಲಾಗಿದೆ ಇದು ನ್ಯಾಯಸಮ್ಮತವಲ್ಲದ ತೀರ್ಪು ಎಂದು ಕಿಡಿಕಾರಿದ್ದಾರೆ.

2002 ರಲ್ಲಿ  ಮುಂಬೈನ ಬಾಂದ್ರಾದಲ್ಲಿ ಕುಡಿದು ವಾಹನ ಚಾಲನೆ ಮಾಡಿದ್ದ ಸಲ್ಮಾನ್ ಖಾನ್ ಒಬ್ಬನ ಸಾವಿಗೆ ಕಾರಣರಾಗುವ ಜತೆಗೆ ಮೂವರ ಅಂಗವೈಕಲ್ಯಕ್ಕೆ ಕಾರಣರಾಗಿದ್ದರು. ಈ ಪ್ರಕರಣದ ಸುದೀರ್ಘ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿತ್ತು. ಅಲ್ಲದೇ ಪ್ರಕರಣದ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾದ  ಡಿ.ಡಬ್ಲು. ದೇಶಪಾಂಡೆ 5 ವರ್ಷಗಳ ಜೈಲುವಾಸವನ್ನು ವಿಧಿಸಿದ್ದರು.

Write A Comment