ಮುಂಬೈ

ಅಭಿಷೇಕ್ ದೇವಾಡಿಗ ಅವರಿಗೆ ಬೆಸ್ಟ್ ಸ್ಟೂಡೆಂಟ್ ಆಫ್ ದ ಈಯರ್ ಪುರಸ್ಕಾರ

Pinterest LinkedIn Tumblr

Abhishek Devadiga

ಮುಂಬಯಿ, ಫೆ.03: ಮಹಾನಗರದ ಆರ್.ಎ ಪೊದರ್ ಕಾಲೇಜ್ ಆಫ್ ಕಾಮರ್ಸ್ ಎಂಡ್ ಇಕಾನಾಮಿಕ್ಸ್ ಮಹಾವಿದ್ಯಾಲಯದ ವಿದ್ಯಾರ್ಥಿ ಅಭಿಷೇಕ್ ಹೆಚ್.ದೇವಾಡಿಗ ಅವರು ‘ಬೆಸ್ಟ್ ಸ್ಟೂಡೆಂಟ್ ಆಫ್ ದ ಈಯರ್’ ಪುರಸ್ಕೃತರಾಗಿದ್ದಾರೆ.

ಬೃಹನ್ಮುಂಬಯಿಯ ವರ್ಲಿ ನಿವಾಸಿ ಆಗಿರುವ ಅಭಿಷೇಕ್ ದೇವಾಡಿಗ ಅವರು ಮೂಲತಃ ಮಂಗಳೂರು ದೇರೆಬೈಲು ಕೊಂಚಾಡಿ ನಿವಾಸಿ ಹೇಮನಾಥ ದೇವಾಡಿಗ ಮತ್ತು ಸುರೇಖಾ ದೇವಾಡಿಗ ಅವರ ಸುಪುತ್ರರಾಗಿದ್ದು ಮಾಟುಂಗಾ ಅಲ್ಲಿನ ಆರ್.ಎ ಪೊದರ್ ಕಾಲೇಜ್ ಆಫ್ ಕಾಮರ್ಸ್ ಎಂಡ್ ಇಕಾನಾಮಿಕ್ಸ್ ಮಹಾವಿದ್ಯಾಲಯದ ತೃತೀಯ ಸಾಲಿನ ಬಿಕಾಂ ವಿದ್ಯಾರ್ಥಿ ಆಗಿದ್ದಾರೆ.

ಅನನ್ಯ ಪ್ರತಿಭಾನ್ವಿತ ಅಭಿಷೇಕ್ ಅವರು ಆರ್.ಎ ಪೊದರ್ ಕಾಲೇಜ್‌ನ 2014-15ರ ಸಾಲಿನ ಪ್ರಧಾನ ಕಾರ್ಯದರ್ಶಿ, ಸಾಂಸ್ಕೃತಿ ವಿಭಾಗದ ಕಾರ್ಯದರ್ಶಿ ಆಗಿದ್ದು 2014-15ರ ವಾರ್ಷಿಕ ಸ್ಟೂಡೆಂಟ್ ಆಫ್ ದ ಇಯರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅಲ್ಲದೆ 2014-15ರ ಸಾಲಿನ ಪ್ರಿನ್ಸಿಪಾಲ್ ಸ್ಪೆಶಿಯಲ್ ಅವಾರ್ಡ್‌ಗೂ ಭಾಜನರಾಗಿದ್ದಾರೆ.

ಕಳೆದ ವಾರ ನಡೆಸಲ್ಪಟ್ಟ ಮಹಾವಿದ್ಯಾಲಯದ ವಾರ್ಷಿಕ ಸಮಾರಂಭದಲ್ಲಿ ಟಾಟಾ ಕ್ಯಾಪಿಟಲ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಪ್ರವೀಣ್ ಕಡ್ಲೆ ಅವರು ಅಭಿಷೇಕ್ ದೇವಾಡಿಗ ಅವರಿಗೆ ಟ್ರೋಫಿಯೊಂದಿಗೆ ಗೌರವಿಸಿ ಅಭಿನಂದಿಸಿದರು.

ಮಂಗಳೂರು ಬೊಂದೆಲ್‌ನ ಕರ್ನಾಟಕ ವ್ಯೆಮೆನ್ಸ್ ಪಾಲಿಟಿಕ್ನಿಕಲ್ ಮತ್ತು ಬೆಸೆಂಟ್ ವ್ಯೆಮೆನ್ಸ್ ಕೊಲೇಜಿನ ಹಳೆ ವಿದ್ಯಾರ್ಥಿನಿ ಡಿಪ್ಲೋಮಾ ಮತ್ತು ಬಿ.ಕಾಂ ಪದವೀಧರೆ ಆಗಿರುವ ಸುರೇಖಾ ಹೇಮನಾಥ ದೇವಾಡಿಗರೂ ಕರ್ನಾಟಕ, ಮಹಾರಾಷ್ಟ್ರ, ಕೇರಳ ಸೇರಿದಂತೆ ರಾಷ್ಟ್ರದ ಅನೇಕ ರಾಜ್ಯಗಳೊಂದಿಗೆ ರಾಷ್ಟ್ರದಾದ್ಯಂತದ ಹಲವಾರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿದ ಓರ್ವ ಅಪ್ರತಿಮ ಕ್ರೀಡಾಪಟು ಎಂದೆಣಿಸಿ ಹತ್ತಾರು ಸ್ವರ್ಣ ಪದಕ ಹಾಗೂ ಬೆಳ್ಳಿ ಪದಕಗಳಿಂದ ಪುರಸ್ಕೃತರಾಗಿದ್ದಾರೆ. ಸುರೇಖಾ ದೇವಾಡಿಗ ಅವರು ದೇವಾಡಿಗ ಸಂಘ ಮುಂಬಯಿ ಮತ್ತು ಕರ್ನಾಟಕ ಸಂಘ ಮುಂಬಯಿ ಇವುಗಳ ಸಕ್ರೀಯ ಸದಸ್ಯೆಯಾಗಿಯೂ ಶ್ರಮಿಸುತ್ತಿದ್ದಾರೆ.

This award is for the Best Student of the year Award of R.A.Podar college Of commerce and Economics on 31st January 2014.
Name : Abhishek Devadiga
Fathers Name : Hemnath Devadiga
Mothers Name : Surekha Devadiga
College Name : R.A.Podar college of commerce and Economics, Matunga.
TYBCOM
1) General Secretary R.A.Podar College of commerce and Economics 2014-2015.
2) Cultural Secretary R.A.Podar college of commerce and Economics.
3) Student of the year Award for the best outstanding Student 2014-2015.
4) Principal Special Award 2014-2015.
5) Award Presented by Mr Praveen Kadle (Managing Director and CEO of Tata Capital Limited )
Address : Worli
Native Place : Derabail Konchady Manglore.

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

Write A Comment