ಮುಂಬೈ

ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‌ನ 62ನೇ ಶಾಖೆ ನಲಾಸೋಫರಾ ಪಶ್ಚಿಮದಲ್ಲಿ ಸೇವಾರ್ಪಣೆ

Pinterest LinkedIn Tumblr

Bharayh Coparative bank mumbai-Jan 6- 2015_001

ಮುಂಬಯಿ, ನ.20: ಬೃಹನ್ಮುಂಬಯಿ ಉಪನಗರದ ನಲಾಸೋಫರಾ ಪಶ್ಚಿಮದ ಪಾಟಣ್ಕರ್ ಪಾರ್ಕ್‌ನ ನ್ಯೂ ಪಾಟಣ್ಕರ್ ಕೋ.ಅಪರೇಟಿವ್ ಸೊಸೈಟಿಯ ತಳಮಹಡಿಯಲ್ಲಿ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ತನ್ನ 62ನೇ ಶಾಖೆಯನ್ನು ಇಂದಿಲ್ಲಿ ಸೋಮವಾರ ಬೆಳಿಗ್ಗೆ ಶುಭಾರಂಭ ಗೊಳಿಸಿತು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೌರವಾಧ್ಯಕ್ಷ ಮತ್ತು ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ರಿಬ್ಬನ್ ಕತ್ತರಿಸಿ ಶಾಖೆಯನ್ನು ಸೇವಾರ್ಪಣೆ ಗೊಳಿಸಿದರು. ಅತಿಥಿಗಳಾಗಿ ಉಪಸ್ಥಿತರಿದ್ದ ಬಂಟ ಸಮಾಜದ ಮುಂದಾಳು ಜಗನ್ನಾಥ ರೈ ಮತ್ತು ಬಿಲ್ಲವರ ಅಸೋಸಿಯೇಶನ್‌ನ ನಲಾಸೋಫರಾ ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಗಣೇಶ್ ವಿ.ಸುವರ್ಣ ಅವರು ಜ್ಯೋತಿ ಪ್ರಜ್ವಲಿಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿರು. ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷೆ ನ್ಯಾ ರೋಹಿಣಿ ಜೆ.ಸಾಲಿಯಾನ್ ಅವರು ಎಟಿಎಂ ಮತ್ತು ನಿರ್ದೇಶಕಿ ಪುಷ್ಫಲತಾ ಎನ್.ಸಾಲ್ಯಾನ್ ಅವರು ಸೇಫ್ ಲಾಕರ್ ಸೇವೆಗೆ ಚಾಲನೆಯನ್ನೀಡಿ ಶುಭಾರೈಸಿದರು.

Bharayh Coparative bank mumbai-Jan 6- 2015_002

Bharayh Coparative bank mumbai-Jan 6- 2015_003

Bharayh Coparative bank mumbai-Jan 6- 2015_004

Bharayh Coparative bank mumbai-Jan 6- 2015_005

Bharayh Coparative bank mumbai-Jan 6- 2015_006

Bharayh Coparative bank mumbai-Jan 6- 2015_007

Bharayh Coparative bank mumbai-Jan 6- 2015_008

Bharayh Coparative bank mumbai-Jan 6- 2015_009

Bharayh Coparative bank mumbai-Jan 6- 2015_010

Bharayh Coparative bank mumbai-Jan 6- 2015_011

Bharayh Coparative bank mumbai-Jan 6- 2015_012

ಸದಾ ಜನಪರ ಆರ್ಥಿಕ ಸೇವಾ ದೂರದೃಷ್ಟಿತ್ವ ಹಾಗೂ ವ್ಯವಸ್ಥಿತ ಕಾರ್ಯಸಾಧನೆ ಬಯಸುವ ಭಾರತ್ ಬ್ಯಾಂಕ್‌ನ ಮೇಲೆ ಗ್ರಾಹಕರು ಇರಿಸಿದ ಅನನ್ಯ ವಿಶ್ವಾಸವೇ ನಮ್ಮ ಸಾಧನೆಯ ಸೂತ್ರವಾಗಿದೆ, ದೇಶದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಅನುಪಮ ಸೇವೆ ನೀಡುತ್ತಿರುವ ತೃಪ್ತಿ ನಮಗಿದೆ ಎಂದು ಜಯ ಸುವರ್ಣರು ತಿಳಿಸಿದದರು.

ಭಾರತ್ ಬ್ಯಾಂಕ್ ಪ್ರಸ್ತುತ (ಕಳೆದ ನವೆಂಬರ್ ಮಾಸ್ಯಾಂತಕ್ಕೆ)ನಿರ್ವಾಹಣಾ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ರೂ. 8280.49 ಕೋಟಿ ಹೊಂದಿದೆ. ಮುಂಗಡ ಮೊತ್ತ (ಸಾಲ) ರೂ. 4853.08 ಕೋಟಿ ಆಗಿದ್ದು, ಪಾಲುಗಾರಿಕಾ (ಶೇರ್ಸ್‌) ಮೊತ್ತ 104.29 ಕೋಟಿ, ಕಾಯ್ದಿರಿಸಿದ (ರಿಸರ್ವ್) ಮೊತ್ತ 104.29 ಕೋಟಿ, ಭದ್ರತಾ ಠೇವಣಿ (ಡಿಪೋಸಿಟ್) ಮೊತ್ತ 7211.42 ಕೋಟಿ, ಇತರೇ ಬಾಧ್ಯತಾ (ಅದರ್ ಲಯಾಬಿಲಿಟಿಸ್) ಮೊತ್ತ 410.50 ಕೋಟಿ, ನಗದು ಮತ್ತು ಶೇಷ (ಕ್ಯಾಶ್ & ಬ್ಯಾಂಕ್ ಬ್ಯಾಲೇನ್ಸ್) ಮೊತ್ತ 377.29 ಕೋಟಿ, ಧನವಿಯೋಗ (ಇನ್‌ವೆಸ್ಟ್‌ಮೆಂಟ್) ಮೊತ್ತ 2663.83 ಕೋಟಿ, ಇತರೇ ಆಸ್ತಿ (ಅದರ್ ಎಸ್ಸೆಟ್) ಮೊತ್ತ 386.29 ಕೋಟಿ ಹೊಂದಿದೆ. ಈ ತಿಂಗಳೊಳಗೆ ಮತ್ತೆ ಕೋಪರ್ ಖೆರ್ನೆ, ಲೋನಾವಲಾ, ವಿಕ್ರೋಲಿ ಪೂರ್ವ ಮತ್ತು ಪರೇಲ್‌ನಲ್ಲಿ ಮತ್ತೆ ನಾಲ್ಕು ಶಾಖೆಗಳನ್ನು ತೆರೆದು ಗ್ರಾಹಕರಿಗೆ ವಿಶ್ವಾಸ ಭರಿತ ಕ್ಷೀಪ್ರ ಸೇವೆಯನ್ನು ನೀಡುವಲ್ಲಿ ಬ್ಯಾಂಕ್ ಬದ್ಧವಾಗಿದೆ ಎಂದು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ತಿಳಿಸಿದರು.

Bharayh Coparative bank mumbai-Jan 6- 2015_013

Bharayh Coparative bank mumbai-Jan 6- 2015_014

Bharayh Coparative bank mumbai-Jan 6- 2015_015

Bharayh Coparative bank mumbai-Jan 6- 2015_016

Bharayh Coparative bank mumbai-Jan 6- 2015_017

Bharayh Coparative bank mumbai-Jan 6- 2015_018

Bharayh Coparative bank mumbai-Jan 6- 2015_019

Bharayh Coparative bank mumbai-Jan 6- 2015_020

Bharayh Coparative bank mumbai-Jan 6- 2015_021

Bharayh Coparative bank mumbai-Jan 6- 2015_022

Bharayh Coparative bank mumbai-Jan 6- 2015_023

Bharayh Coparative bank mumbai-Jan 6- 2015_024

ಈ ಶುಭಾವಸರದಲ್ಲಿ ಅತಿಥಿಗಳಾಗಿ ಬ್ಯಾಂಕ್‌ನ ಮಾಜಿ ನಿರ್ದೇಶಕ ಎನ್.ಎಂ ಸನೀಲ್, ಸಮಾಜ ರತ್ನ ಲ ಶಂಕರ್ ಕೆ.ಟಿ (ಶೆಟ್ಟಿ), ಕಾಂಗ್ರೇಸ್ ನೇತಾರ ವಿಠಲ ಎಸ್.ಪೂಜಾರಿ, ಕಟ್ಟಡದ ಮಾಲಿಕರಾದ ಜೂಡ್ ಅಲ್ಮೇಡಾ, ಋತುಜಾ ಅಲ್ಮೇಡಾ, ಸ್ಥಾನೀಯ ನಗರ ಸೇವಕರುಗಳಾದ ವಿಜಯ ರಾಣೆ, ಅನೀಲ್ ಭೋಗ್ಲೆ, ನರೇಶ್ ಜಾಧವ್, ವಿಶ್ವನಾಥ್ ಪೂಜಾರಿ, ಕೋಡಿ ಗೋಪಾಲ, ಅಶೋಕ್ ಸಾಲ್ಯಾನ್, ಶಶಿಧರ ಶೆಟ್ಟಿ, ಜಗಧೀಶ್ ಅಮೀನ್, ರೂಪೇಶ್ ಜಾಧವ್, ಹರೀಶ್ ಶೆಟ್ಟಿ, ಪ್ರಕಾಶ್ ಕೋಟ್ಯಾನ್ (ಮಲಾಯ್ಕ), ಬ್ಯಾಂಕ್‌ನ ನಿರ್ದೇಶಕರುಗಳಾದ ಜ್ಯೋತಿ ಕೆ.ಸುವರ್ಣ, ಚಂದ್ರಶೇಖರ ಎಸ್.ಪೂಜಾರಿ, ರೋಹಿತ್ ಎಂ.ಸುವರ್ಣ, ಕೆ.ಬಿ.ಪೂಜಾರಿ, ಆರ್.ಡಿ ಪೂಜಾ ರಿ, ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ. ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಮತ್ತು ಮತ್ತು ಸ್ಥಳೀಯ ನೂರಾರು ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ಶುಭರೈಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಮುಖ್ಯ ಪ್ರಧಾನ ಪ್ರಬಂಧಕ ಅನಿಲ್‌ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶೋಭಾ ದಯಾನಂದ್, ಮಹಾ ಪ್ರಂಬಧಕ ನಿತ್ಯಾನಂದ ಡಿ.ಕೋಟ್ಯಾನ್, ಉಪ ಪ್ರಧಾನ ವ್ಯವಸ್ಥಾಪಕರುಗಳಾದ ವಿವೇಕ್ ಎಸ್.ಶ್ಯಾನ್‌ಭಾಗ್, ಮೋಹನ್‌ದಾಸ್ ಹೆಜ್ಮಾಡಿ, ವಿದ್ಯಾನಂದ ಕರ್ಕೇರ, ದಿನೇಶ್ ಬಿ.ಸಾಲ್ಯಾನ್, ಸಹಾಯಕ ಪ್ರಧಾನ ಪ್ರಬಂಧಕರುಗಳಾದ ಡಾ ಯು.ಧನಂಜಯ ಕುಮಾರ್, ಜನಾರ್ಧನ ಎಂ.ಪೂಜಾರಿ, ಬ್ಯಾಂಕ್‌ನ ಅಭಿವೃದ್ಧಿ ಇಲಾಖೆಯ ಬ್ಯಾಂಕ್‌ನ ಸಹಾಯಕ ಪ್ರಬಂಧಕ ಸುನೀಲ್ ಗುಜರನ್, ಅಧಿಕಾರಿಗಳಾದ ಅವೀಶ್ ಪೂಜಾರಿ, ವಿಜಯ್ ಪಾಲನ್ ಸೇರಿದಂತೆ ವಿವಿಧ ಶಾಖೆಗಳ ಮುಖ್ಯಸ್ಥರುಗಳಾದ ದಿನೇಶ್ ಕೆ.ಕುಕ್ಯಾನ್ (ವಿರಾರ್), ಧರ್ಮನಾಥ್ ಆರ್.ಪೂಜಾರಿ (ಲ್ಯಾಮಿಂಗ್ಟನ್ ರೋಡ್) ಮತ್ತಿತರರು ಹಾಜರಿದ್ದು ಶಾಖೆಯ ಉನ್ನತಿಗೆ ಶುಭಕೋರಿದರು.

ಉಳ್ಳೂರು ಶ್ರೀ ಧನಂಜಯ ಶಾಂತಿ, ಮತ್ತು ಗಂಗಾಧರ ಕಲ್ಲಾಡಿ ಅವರು ವಾಸ್ತುಪೂಜೆ, ಗಣಹೋಮ, ಸತ್ಯನಾರಾಯಣ ಮಹಾಪೂಜೆ ನೆರವೇರಿಸಿದರು. ಶ್ರೀ ಶೇಖರ್ ಶಾಂತಿ ದ್ವಾರಪೂಜೆಗೈದು ತೀರ್ಥ-ಪ್ರಸಾದ ವಿತರಿಸಿದರು. ಸದಾಶಿವ ಎ.ಕರ್ಕೇರ ಮತ್ತು ದೇವಕಿ ಸದಾಶಿವ್ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಶಾಖೆಯ ಮುಖ್ಯಸ್ಥೆ ಕಸ್ತೂರಿ ಎಸ್.ಅವಿೂನ್ ಸ್ವಾಗತಿಸಿದರು. ಮಹಾ ಪ್ರಂಬಧಕ ನಿತ್ಯಾನಂದ ಡಿ.ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಸಹ ಪ್ರಬಂಧಕ ಅಶೋಕ್ ಶೆಟ್ಟಿ ವಂದಿಸಿದರು.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

Write A Comment