ಮುಂಬೈ

ಶಿವಸೇನೆ ‘ಮಹಾ’ ಸರ್ಕಾರದ ಭಾಗವಾಗಬೇಕು: ಫಡ್ನವೀಸ್

Pinterest LinkedIn Tumblr

fadnvis

ಮುಂಬೈ: ಬದ್ಧ ವೈರಿಯಂತಾಗಿರುವ ಬಹುಕಾಲದ ಮಿತ್ರ ಪಕ್ಷ ಶಿವಸೇನೆಯೊಂದಿಗೆ ಬಿಜೆಪಿ ಮರು ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಶಿವಸೇನೆ ಮಹಾರಾಷ್ಟ್ರ ಸರ್ಕಾರದ ಭಾಗವಾಗಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರದ ಭಾಗವಾಗಿರುವ ಶಿವಸೇನೆ ರಾಜ್ಯದಲ್ಲೂ ಸರ್ಕಾರದ ಭಾಗವಾಗಬೇಕು ಎಂದಿದ್ದಾರೆ.

ಇಬ್ಬರೂ ಒಂದಾಗಿ ಸರ್ಕಾರ ನಡೆಸಬೇಕು ಎಂಬುದು ಎರಡು ಪಕ್ಷಗಳ ಅಭಿಮತವಾಗಿದೆ ಎಂದು ಫಡ್ನವೀಸ್ ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ತಾವು ಇತ್ತೀಚಿಗೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಿದ್ದು, ಮೈತ್ರಿ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ, ಶಿವಸೇನೆ ಸರ್ಕಾರದ ಭಾಗವಾಗುವ ಬಗ್ಗೆ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರೊಂದಿಗೆ ಔಪಚಾರಿಕ ಒಪ್ಪಂದವಾಗಿದ್ದು, ಶಿವಸೇನೆಯ 10 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಶಿವಸೇನೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿತ್ತು. ಆದರೆ ಈಗ ಗೃಹ ಖಾತೆ ಸೇರಿದಂತೆ ಇಂಧನ, ಲೋಕೋಪಯೋಗಿ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಪ್ರಮುಖ ಖಾತೆಗಳನ್ನು ಪಡೆಯುವ ಸಾಧ್ಯತೆ ಇದೆ.

Write A Comment