ಕನ್ನಡ ವಾರ್ತೆಗಳು

ಇನ್ನು ಬೈಕ್ ಶುಚಿಗೊಳಿಸುವ ತಲೆಬಿಸಿ ಬಿಡಿ: ಈಗ ಬಂದಿದೆ ಸ್ಪಾ

Pinterest LinkedIn Tumblr

psmec26spa2

ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಲು ಬ್ಯೂಟಿ ಸ್ಪಾ, ಮುದ್ದಿನ ಶ್ವಾನಗಳಿಗಾಗಿ ಪೆಟ್‌ ಸ್ಪಾ, ಕಾರುಗಳಿಗಾಗಿ ಕಾರ್‌ ಸ್ಪಾ ಇರುವ ಹಾಗೆ ಈಗ ಬೈಕ್‌ಗಳ ಅಂದ ಕಾಪಾಡಲು ರೊಡಿಯೋ ಬೈಕ್‌ ಸ್ಪಾ ಪ್ರಾರಂಭವಾಗಿದೆ.

ರೊಡಿಯೋ ಬೈಕ್‌ ಸ್ಪಾದಲ್ಲಿ ಬೈಕ್‌ಗಳಿಗೆ ಪಂಚಕರ್ಮ ಸ್ಪಾ ಸೇವೆ ನೀಡಲಾಗುತ್ತದೆ. ವಿದೇಶಗಳಲ್ಲಿ ಬೈಕ್‌ಗಳಿಗೆ ನೀಡುವ ಸ್ಪಾ ಸೇವೆಯನ್ನು ಪ್ರಥಮ ಬಾರಿಗೆ ಬೆಂಗಳೂರಿಗೆ ಪರಿಚಯಿಸಲಾಗಿದೆ. ಬೈಕ್‌ ಎಷ್ಟೇ ಕೊಳೆಯಾಗಿದ್ದರೂ ಕೆಲವೇ ನಿಮಿಷಗಳಲ್ಲಿ ಮಿರಮಿರ ಮಿಂಚುವಂತೆ ಆಗುತ್ತದೆ.

ಬೆಂಗಳೂರಿನವರೇ ಆದ ಪ್ರಸಾದ್‌ ರೆಡ್ಡಿ ಬಿಬಿಎಂ ಮುಗಿಸಿದ ನಂತರ ಉನ್ನತ ವ್ಯಾಸಂಗಕ್ಕಾಗಿ ಯು.ಕೆ.ಗೆ ಹೋಗಿದ್ದರು. ಅಲ್ಲಿ ಎಂಬಿಎ ಮುಗಿಸಿ ಬೆಂಗಳೂರಿಗೆ ಬಂದ ನಂತರ ಏನು ಮಾಡಬೇಕು ಎಂಬ ಯೋಚನೆ ಅವರನ್ನು ಕಾಡಲಾರಂಭಿಸಿತು. ಆಗಲೇ ಹುಟ್ಟಿದ ಕೂಸು ಈ ಬೈಕ್‌ ಸ್ಪಾ.

ಎಂಬಿಎ ಮುಗಿಸಿ ಸ್ವಲ್ಪ ಸಮಯ ಯು.ಕೆ.ನಲ್ಲಿಯೇ ಕೆಲಸ ಮಾಡಿಕೊಂಡಿದ್ದ ಪ್ರಸಾದ್‌ ಬೈಕ್‌ ಸ್ಪಾ ಪ್ರಾರಂಭಿಸುವ ಬಗ್ಗೆ ಎಲ್ಲ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಬೆಂಗಳೂರಿಗೆ ಬಂದ ನಂತರ ಒಂದು ವರ್ಷ ತಯಾರಿ ನಡೆಸಿ, ತೈವಾನ್‌ನಿಂದ ಬೈಕ್‌ ಸ್ಪಾ ಮಷಿನ್‌ ತರಿಸಿಕೊಂಡು ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ತೈವಾನ್‌ನಿಂದ ಆಮದು ಮಾಡಿಕೊಂಡಿರುವ ಈ ಬೈಕ್‌ ಸ್ಪಾ ಮಷಿನ್‌ ಬೆಲೆ ರೂ. 16 ಲಕ್ಷ. ಈ ಆಟೋಮ್ಯಾಟಿಕ್‌ ಮಷಿನ್‌ನಲ್ಲಿ ಕೇವಲ ಬಟನ್‌ಗಳನ್ನು ಒತ್ತಿದರೆ,  ಮಾಡಬೇಕಾದ ಕೆಲಸಗಳನ್ನು ಮಾಡಿ ಮುಗಿಸುತ್ತದೆ.

‘ಈ ಮಷಿನ್‌ ಒಂದು ಬೈಕ್‌ ತೊಳೆಯಲು ಏಳರಿಂದ ಎಂಟು ಲೀಟರ್‌ ನೀರು ಬಳಕೆ ಮಾಡುತ್ತದೆ. ಹೀಗೆ ಮಷಿನ್‌ ಒಮ್ಮೆ ಬಳಕೆ ಮಾಡಿದ ನೀರನ್ನು ಮರುಬಳಕೆ ಮಾಡುವ ಉದ್ದೇಶದಿಂದ ಷೋರೂಮ್‌ನ ಆವರಣದಲ್ಲೇ ನೀರಿನ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ. ಇದರಿಂದಾಗಿ ಒಮ್ಮೆ ಬಳಕೆಯಾದ ನೀರನ್ನು ಸಂಸ್ಕರಿಸಿ 10 ಬಾರಿ ಬಳಕೆ ಮಾಡುತ್ತೇವೆ. ಇದರಿಂದ ನೀರಿನ ಬಳಕೆ ತುಂಬಾ ಕಡಿಮೆ ಆಗುತ್ತದೆ’ ಎನ್ನುತ್ತಾರೆ ಪ್ರಸಾದ್‌ ರೆಡ್ಡಿ.

‘ಇಷ್ಟೇ ಅಲ್ಲದೆ ಬೈಕ್‌ ತೊಳೆಯಲು ಪರಿಸರ ಸ್ನೇಹಿ (ಬಯೋ ಡಿಗ್ರೇಡಬಲ್‌) ವಸ್ತುಗಳನ್ನು ಮಷಿನ್‌ನಲ್ಲಿ ಬಳಸಲಾಗುತ್ತದೆ. ಇದರಿಂದಾಗಿ ಅವು ಪರಿಸರವನ್ನು ಸೇರಿದರೂ ಯಾವುದೇ ತೊಂದರೆಯಾಗುವುದಿಲ್ಲ. ಇವುಗಳಿಂದ ಬೈಕ್‌ನ ಬಣ್ಣ ದೀರ್ಘಕಾಲ ಉಳಿಯುತ್ತದೆ. ಆದರೆ ಹೊರಗೆ ಬಳಸುವ ಆಯಿಲ್‌ಗಳಿಂದ ಬೈಕ್‌ಗಳ ಬಣ್ಣ ಬಹಳ ಬೇಗ ಹೊಳಪನ್ನು ಕಳೆದುಕೊಳ್ಳುತ್ತದೆ’ ಎಂದು ವಿವರಿಸುತ್ತಾರೆ ಅವರು.

ರೊಡಿಯೋ ಬೈಕ್‌ ಸ್ಪಾ ಮತ್ತಿಕೆರೆಯಿಂದ ಯಶವಂತಪುರಕ್ಕೆ ಸಂಪರ್ಕ ಕಲ್ಪಿಸುವ ಲಿಂಕ್‌ ರಸ್ತೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಕಾರ್ಯನಿವಹಿಸುತ್ತಿದೆ. ದಿನಕ್ಕೆ 30ರಿಂದ 40 ಬೈಕ್‌ಗಳಿಗೆ ಸೇವೆ ನೀಡಲಾಗುತ್ತದೆ. ಇಲ್ಲಿ ಸದ್ಯಕ್ಕೆ ಆರು ಮಂದಿ ಸಿಬ್ಬಂದಿ ಕಾರ್ಯ ನಿರ್ಹಿಸುತ್ತಿದ್ದಾರೆ. ವಾರದ ಏಳೂ ದಿನಗಳು ಸೇವೆ ನೀಡುವ ಈ ಬೈಕ್‌ ಸ್ಪಾ ದ ಸಮಯ: ಬೆಳಿಗ್ಗೆ 9.30ರಿಂದ ರಾತ್ರಿ 9.30.
ಮಾಹಿತಿಗೆ: 95358 82951. http: www.rodeos.in

ಪಂಚಕರ್ಮ ಸೇವೆಗಳು
3* ವಾಶ್‌: ಬೈಕ್‌ಗೆ ಬೇಸಿಕ್‌ ವಾಶ್‌. ಎಂಜಿನ್‌ ಡಿ ಗ್ರೀಸಿಂಗ್‌, ಟ್ರಿಪ್‌ ಫೋಮ್‌ ಅಪ್ಲಿಕೇಷನ್‌, ಬಾಡಿ ಹಾಗೂ ಎಂಜಿನ್‌ ಉಜ್ಜಿ, ನಂತರ ಡಿಟರ್ಜೆಂಟ್‌ನಿಂದ ಬೈಕನ್ನು ತೊಳೆದು, ಡ್ರೈ ಮಾಡಿ ನೀಡಲಾಗುತ್ತದೆ. ಇದಕ್ಕೆ ತಗುಲುವ ಸಮಯ ಕೇವಲ ಮೂರು ನಿಮಿಷ. ಬೆಲೆ: 200 ಸಿಸಿ ಬೈಕ್‌-ರೂ.99, 200ನಿಂದ 500 ಸಿಸಿ ಬೈಕ್‌– ರೂ.129, 500ಹಾಗೂ ಅದಕ್ಕಿಂತ ಹೆಚ್ಚಿನ ಸಿಸಿ ಬೈಕ್‌ಗಳಿಗೆ ರೂ.189

4* ವಾಶ್‌: ಎಂಜಿನ್‌ ಡಿ ಗ್ರೀಸಿಂಗ್‌, ಟ್ರಿಪ್‌ ಫೋಮ್‌ ಅಪ್ಲಿಕೇಷನ್‌, ಬಾಡಿ ಹಾಗೂ ಎಂಜಿನ್‌ ಉಜ್ಜಿ, ನಂತರ ಡಿಟರ್ಜೆಂಟ್‌ನಿಂದ ಬೈಕನ್ನು ತೊಳೆದು, ಸೂಪರ್‌ ವ್ಯಾಕ್ಸ್‌ ಹಚ್ಚಿ, ತೊಳೆದು ಡ್ರೈ ಮಾಡಿ ನೀಡಲಾಗುತ್ತದೆ. ಇದಕ್ಕೆ ತಗುಲುವ ಸಮಯ ನಾಲ್ಕು ನಿಮಿಷ.
ಬೆಲೆ: 200 ಸಿಸಿ ಬೈಕ್‌-ರೂ.124, 200ನಿಂದ 500 ಸಿಸಿ ಬೈಕ್‌-ರೂ.159, 500ಹಾಗೂ ಅದಕ್ಕಿಂತ ಹೆಚ್ಚಿನ ಸಿಸಿ ಬೈಕ್‌ಗಳಿಗೆ ರೂ.249

5* ವಾಶ್‌: ಎಂಜಿನ್‌ ಡಿ ಗ್ರೀಸಿಂಗ್‌, ಟ್ರಿಪ್‌ ಫೋಮ್‌ ಅಪ್ಲಿಕೇಷನ್‌, ಬಾಡಿ ಹಾಗೂ ಎಂಜಿನ್‌ ಉಜ್ಜಿ, ಡಿಟರ್ಜೆಂಟ್‌ನಿಂದ ಬೈಕನ್ನು ತೊಳೆದು, ಸೂಪರ್‌ ವ್ಯಾಕ್ಸ್‌ ಹಚ್ಚಿ, ನಂತರ ತೊಳೆದು ಡ್ರೈ ಮಾಡಿದ ಮೇಲೆ ಬೈಕ್‌ನ ಟೈರ್‌ಗಳಿಗೆ ಪಾಲಿಶ್‌ ಮಾಡಲಾಗುತ್ತದೆ. ಇದಕ್ಕೆ ತಗುಲುವ ಸಮಯ ಐದು ನಿಮಿಷ. ಬೆಲೆ: 200 ಸಿಸಿ ಬೈಕ್‌-ರೂ.149, 200ನಿಂದ 500 ಸಿಸಿಬೈಕ್‌-ರೂ.189, 500ಹಾಗೂ ಅದಕ್ಕಿಂತ ಹೆಚ್ಚಿನ ಸಿಸಿ ಬೈಕ್‌ಗಳಿಗೆ ರೂ.299.

7* ವಾಶ್‌: ಎಂಜಿನ್‌ ಡಿ ಗ್ರೀಸಿಂಗ್‌, ಟ್ರಿಪ್‌ ಫೋಮ್‌ ಅಪ್ಲಿಕೇಷನ್‌, ಬಾಡಿ ಹಾಗೂ ಎಂಜಿನ್‌ ಶುಚಿಗೊಳಿಸಿ, ನಂತರ ಡಿಟರ್ಜೆಂಟ್‌ನಿಂದ ಬೈಕನ್ನು ತೊಳೆದು, ಸೂಪರ್‌ ವ್ಯಾಕ್ಸ್‌ ಹಚ್ಚಿ, ನಂತರ ತೊಳೆದು ಡ್ರೈ ಮಾಡಿದ ಮೇಲೆ ಬೈಕ್‌ನ ಟೈರ್‌ಗಳಿಗೆ ಪಾಲಿಶ್‌ ಮಾಡಲಾಗುತ್ತದೆ. ನಂತರ ಬೈಕ್‌ ಹಾಗೂ ಎಂಜಿನ್‌ ಕಂಪಾರ್ಟ್‌ಮೆಂಟ್‌ಗೆ ಪಾಲಿಶ್‌ ಹಚ್ಚಲಾಗುತ್ತದೆ. ಅದಕ್ಕೂ ಮೊದಲು ಎಂಜಿನ್‌ ಮೇಲೆ ಇರುವ ಕಲೆಗಳನ್ನೂ ತೆಗೆಯಲಾಗುತ್ತದೆ. ಇದಕ್ಕೆ ತಗುಲುವ ಸಮಯ 15 ನಿಮಿಷ. ಬೆಲೆ: 200 ಸಿಸಿ ಬೈಕ್‌–ರೂ.249, 200ನಿಂದ 500 ಸಿಸಿ ಬೈಕ್‌-ರೂ.299, 500 ಹಾಗೂ ಅದಕ್ಕಿಂತ ಹೆಚ್ಚಿನ ಸಿಸಿ ಬೈಕ್‌ಗಳಿಗೆ ರೂ.399

ಬೈಕ್‌ ಡಿಟೇಲಿಂಗ್‌:  ಕಳೆಗುಂದಿರುವ ಬೈಕ್‌ಗಳನ್ನು ಹೊಳೆಯುವಂತೆ ಮಾಡಲಾಗುತ್ತದೆ. ಅದಕ್ಕಾಗಿ 4 ಹಂತಗಳಲ್ಲಿ ಪೇಂಟ್‌ ಪ್ರೊಟೆಕ್ಷನ್‌ ಲೋಷನ್‌ಗಳನ್ನು ಬಳಸಲಾಗುತ್ತದೆ. ಜತೆಗೆ ಯುವಿ ಟ್ರೀಟ್‌ಮೆಂಟ್‌ ಹಾಗೂ ಗ್ಲಾಸಿ ಫಿನೀಶಿಂಗ್‌ ನೀಡಲಾಗುತ್ತದೆ. ಇಲ್ಲಿ ಬೈಕ್‌ಗಳ ಬಾಡಿವಾಷ್‌ನೊಂದಿಗೆ ನಂತರ ಬೈಕ್‌ ಬಾಡಿಗೆ ಪಾಲಿಷ್‌ ಮಾಡಲಾಗುತ್ತದೆ. ಈ ಪಾಲಿಷ್‌ ದೀರ್ಘ ಕಾಲ ಬಾಳಿಕೆ ಬರುತ್ತದೆ. ಜತೆಗೆ ತಗುಲುವ ಸಮಯ 45 ನಿಮಿಷ. ಬೆಲೆ: ಸ್ಕೂಟರ್‌ಗಳಿಗೆ ರೂ. 600, ಸಾಮಾನ್ಯ ಬೈಕ್‌ಗಳಿಗೆ 700 ಹಾಗೂ ಬುಲೆಟ್‌ನಂತಹ ಬೈಕ್‌ಗಳಿಗೆ ರೂ. 800 ಇವುಗಳೊಂದಿಗೆ ರೂ. 150ಕ್ಕೆ ಚೈನ್‌ ಲೂಬ್ರಿಕೇಷನ್ ಸಹ ಮಾಡಲಾಗುತ್ತದೆ.

ಸಮಯದ ಉಳಿತಾಯ
ವಿದೇಶಗಳಲ್ಲಿ ಕೆಲಸಗಾರರು ಸಿಗುವುದು ತುಂಬಾ ಕಡಿಮೆ. ಹಾಗೆ ಸಿಕ್ಕರೂ ಅವರಿಗೆ ಹೆಚ್ಚಿನ ಹಣ ನೀಡಬೇಕಾಗುತ್ತದೆ. ಅದಕ್ಕಾಗಿಯೇ ಪ್ರತಿಯೊಂದಕ್ಕೂ ಯಂತ್ರಗಳನ್ನೇ ಅವಲಂಬಿಸಿರುತ್ತಾರೆ. ಇದನ್ನು ಗಮನಿಸಿದ ನನಗೆ ಬೈಕ್‌ ಸ್ಪಾ ಕಣ್ಣಿಗೆ ಬಿತ್ತು. ಆಗ ಇದನ್ನೇ ನಾನು ಪ್ರಾರಂಭಿಸಬೇಕು ಎಂದು ನಿರ್ಧರಿಸಿದೆ. ಅದರಲ್ಲೂ ಭಾರತದಲ್ಲೇ ಎಲ್ಲೂ ಇಂಥ ಸೇವೆ ಇರಲಿಲ್ಲ. ಇದನ್ನು ಗಮನಿಸಿಯೇ ಈ ಕೆಲಸಕ್ಕೆ ಕೈ ಹಾಕಿದೆ. ಈಗ ಯಶಸ್ವಿಯಾಗಿದ್ದೇನೆ. ತುಂಬಾ ಕಡಿಮೆ ಸಮಯದಲ್ಲಿ ಬೈಕ್‌ ವಾಶ್‌ ಆಗುವುದರಿಂದ ಸಮಯ ಉಳಿಯುತ್ತದೆ.
–ಪ್ರಸಾದ್‌ ರೆಡ್ಡಿ, ಮಾಲೀಕ

Write A Comment