ಮುಂಬೈ

ಬಂಟರ ಸಂಘ – ಸನ್ಮಾನ, ರಕ್ತದಾನ ಶಿಭಿರ, ದತ್ತಿನಿಧಿ ವಿತರಣೆ

Pinterest LinkedIn Tumblr

Ishwar Mumbai_Sept 17_2014_008

ಮುಂಬಯಿ: ಸೆ. 14ರಂದು ಅಪರಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘವು ಬೊರಿವಲಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಗೊಂಡ ಸಂಸದ ಗೋಪಾಲ್‌ ಸಿ. ಶೆಟ್ಟಿ ಯವರನ್ನು ಸನ್ಮಾನಿಸಿದ್ದು, ಸನ್ಮಾನಕ್ಕೆ ಉತ್ತರಿಸಿದ ಅವರು ಮುಂಬಯಿಗೆ ಬಂದು ಎಲ್ಲರಂತೆ ಕಷ್ಟಪಟ್ಟು ಸಂಪಾದಿಸಬೇಕು ಎನ್ನು ವುದು ನನ್ನ ಮುಖ್ಯ ಉದ್ದೇಶ ಆಗಿತ್ತು. ನಾನೋರ್ವ ರಾಜಕಾರಣಿಯಾಗಬೇಕು ಎಂಬ ಯಾವುದೇ ಕನಸು ಕಂಡವನಲ್ಲ. ಆ ಬಯಕೆಯೂ ನನ್ನಲ್ಲಿ ಇರಲಿಲ್ಲ. ನಾನು ವಾಸಿಸುತ್ತಿದ್ದ ಪ್ರದೇಶದ ಚಾಳ್‌ಗಳಲ್ಲಿ ಜನರು ಯಾವುದೇ ಸೌಲಭ್ಯಗಳಿಲ್ಲದೆ ಪರದಾಡುವ ಪರಿಸ್ಥಿತಿ ಇತ್ತು. ಜನರ ಪರಿಸ್ಥಿತಿಯನ್ನು ಕಂಡು, ಅದನ್ನು ಸುಧಾರಿಸಬೇಕು ಎಂಬ ಛಲ ಮೂಡಿತು. ಹಿರಿಯ ರಾಜ ಕಾರಣಿ ರಾಮ್‌ನಾಯಕ್‌ ಅವರು ನನ್ನ ಸಾಹಸದ ಗುಣವನ್ನು ಗಮನಿಸಿ ರಾಜಕಾರಣಕ್ಕೆ ತಂದರು. ಜನತೆಯ ಪ್ರೋತ್ಸಾಹದಿಂದ ಇಂದು ಸಂಸದನಾಗಿದ್ದೇನೆ.

ಬಂಟ ಸಮಾಜದ ಹಾಗೂ ತುಳು-ಕನ್ನಡಿಗರ ಸಹಾಯ, ಪ್ರೋತ್ಸಾಹದಿಂದ ನನಗಿದೆ. ರಾಜಕೀಯ ಪಕ್ಷಗಳ ಎಲ್ಲ ಮುಖಂಡರು ನನ್ನೊಂದಿಗೆ ಆತ್ಮೀಯರಾಗಿದ್ದಾರೆ. ನನ್ನ ಮಾತುಗಳಿಗೆ ಸ್ಪಂದಿಸುತ್ತಾರೆ, ಗೌರವ ನೀಡುತ್ತಾರೆ. ಬಂಟರ ಸಂಘಕ್ಕೆ ಭೇಟಿ ನೀಡಿದಾಗಲೆಲ್ಲ ಗೌರವದ ಭಾವನೆ ಮೂಡುತ್ತದೆ. ಮುಂಬಯಿ ಬಂಟರು ಅಗ್ರಗಣ್ಯ ಸ್ಥಾನದಲ್ಲಿದ್ದಾರೆ. ಎಂದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಸಿಎ ಶಂಕರ ಬಿ. ಶೆಟ್ಟಿ ಸ್ವಾಗತಿಸುತ್ತಾ, ಹಿರಿಯ ಸಾಹಿತಿ ದಿ| ಡಾ| ಸಂಜೀವ ಶೆಟ್ಟಿ ಅವರ ಸ್ಮರಣಾರ್ಥ ಅವರ ಅಭಿಮಾನಿ ಬಳಗವು ಆರ್ಥಿಕವಾಗಿ ತೊಂದರೆಯಲ್ಲಿರುವ ತುಳು-ಕನ್ನಡಿಗರ ವಿದ್ಯಾರ್ಥಿಗಳಿಗೆ ನೀಡಲೆಂದು ಬಂಟರ ಸಂಘಕ್ಕೆ ಇಟ್ಟಿರುವ ದತ್ತಿನಿಧಿಯಲ್ಲಿ ಈ ಬಾರಿ 165 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸಂಘವು ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣದಲ್ಲಿ ವಿಶ್ವಮಟ್ಟದಲ್ಲಿ ಈ ವರ್ಷ 16 ವಿದ್ಯಾರ್ಥಿಗಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನೀಡಿ ಪ್ರೋತ್ಸಾಹಿಸುತ್ತಿದೆ.

ವಿದ್ಯಾರ್ಥಿಗಳು ಸಂಪಾದನೆಯಲ್ಲಿ ತೊಡಗಿದ ಅನಂತರ ಈ ಮೊತ್ತವನ್ನು ಸಂಘಕ್ಕೆ ಹಿಂದಿರುಗಿಸಿ ಇತರರು ಇದರ ಸಹಾಯವನ್ನು ಪಡೆಯುವಂತೆ ಸಹಕರಿಸಬೇಕು. ರಕ್ತದಾನ ಶಿಬಿರದಲ್ಲಿ ಸುಮಾರು 750 ಯೂನಿಟ್‌ರಕ್ತವನ್ನು ಸಂಗ್ರಹಿಸಲಾಗಿದೆ. ಬಂಟ ಸಮಾಜದ ಯಾವುದೇ ವ್ಯಕ್ತಿಗೆ ರಕ್ತದ ಆವಶ್ಯಕತೆ ಕಂಡು ಬಂದಲ್ಲಿ ಸಂಘವನ್ನು ಸಂಪರ್ಕಿಸಬಹುದು ಎಂದರು.

Ishwar Mumbai_Sept 17_2014_005

Ishwar Mumbai_Sept 17_2014_006

ದಿ| ಡಾ| ಸಂಜೀವ ಶೆಟ್ಟಿ ಅಭಿಮಾನಿ ಬಳಗದ ಕೆ. ಪಿ. ಪ್ರಭಾಕರ ಶೆಟ್ಟಿ ಭಿವಂಡಿ, ಡಾ| ರತ್ನಾಕರ ಶೆಟ್ಟಿ ಅವರ ಉಪಸ್ಥಿತಿಯಲ್ಲಿ 165 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಉನ್ನತ ವ್ಯಾಸಂಗ ಹಾಗೂ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ 16 ವಿದ್ಯಾರ್ಥಿಗಳನ್ನು ಗುರುತಿಸಿ ರೂ. 8 ಲಕ್ಷ ಮೊತ್ತವನ್ನು ಬಂಟರ ಸಂಘದ ವಿದ್ಯಾರ್ಥಿ ವೇತನವಾಗಿ ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ಸಾಹಿತಿ, ಶಿಕ್ಷಕರಾಗಿ ನಾಡು-ನುಡಿಯ ಸೇವೆಗೈದ ಡಾ| ಸಂಜೀವ ಶೆಟ್ಟಿ ಅವರೋರ್ವ ಹೃದಯ ಶ್ರೀಮಂತಿಕೆಯ ಬಂಟರಾಗಿ ದ್ದಾರೆ ಎಂದು ನುಡಿದು ವಿದ್ಯಾರ್ಥಿ ವೇತನ ಪಡೆದವರ ಯಾದಿಯನ್ನು ಓದಿದರು.

ಸಂಘದ ಜತೆ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ ಹಾಗೂ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ 16 ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಆಯ್ಕೆ ಪಟ್ಟಿಯನ್ನು ವಾಚಿಸಿದರು.

ಗೋಪಾಲ್‌ ಸಿ. ಶೆಟ್ಟಿ, ಸಿಎ ಶಂಕರ್‌ ಬಿ. ಶೆಟ್ಟಿ, ಕೆ. ಡಿ. ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಜಯರಾಮ ಎನ್‌. ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಲತಾ ಪಿ. ಶೆಟ್ಟಿ ಮೊದಲಾದವರು ವಿದ್ಯಾರ್ಥಿ ವೇತನ ವಿತರಿಸಿದರು. ಕರ್ನಾಟಕ ಪ್ರೀ ನೈಟ್‌ ಹೈಸ್ಕೂಲ್‌ ಘಾಟ್‌ಕೋಪರ್‌ ವಿದ್ಯಾರ್ಥಿಗಳು ಈ ಬಾರಿಯ ಎಸ್‌ಎಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದಿದ್ದು, ಅವರೆಲ್ಲರನ್ನು ವಿದ್ಯಾರ್ಥಿ ವೇತನವನ್ನಿತ್ತು ಅಭಿನಂದಿಸಲಾಯಿತು.

ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸದಾಶಿವ ಬಿ. ಶೆಟ್ಟಿ ಅವರು ವಿದ್ಯಾರ್ಥಿಗಳ ಯಾದಿಯನ್ನು ಓದಿದರು. ಗೌರವ ಕೋಶಾಧಿಕಾರಿ ಸಿಎ ಸತೀಶ್‌ಶೆಟ್ಟಿ ಅವರು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ, ವಿಶ್ವಸ್ತರಿಗೆ ಪುಷ್ಪಗುತ್ಛವಿತ್ತು ಗೌರವಿಸಿದರು.ಪ್ರಶಾಂತಿ ಡಿ. ಶೆಟ್ಟಿ ಪ್ರಾರ್ಥಿಸಿದರು. ಅತಿಥಿ-ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸದ ಗೋಪಾಲ್‌ಸಿ. ಶೆಟ್ಟಿ ಅವರನ್ನು ಬಂಟರ ಸಂಘದಿಂದ ಶಾಲು ಹೊದೆಸಿ, ಪೇಟ ತೊಡಿಸಿ, ಸ್ಮರಣಿಕೆ, ಸಮ್ಮಾನಪತ್ರವನ್ನಿತ್ತು ಸಮ್ಮಾನಿಸಲಾಯಿತು.

ಡಾ| ವಿಜೇತ ಶೆಟ್ಟಿ ಸಮ್ಮಾನ ಪತ್ರವನ್ನು ಓದಿದರು. ಡಾ| ವಿಜೇತಾ ಶೆಟ್ಟಿ, ಅಶೋಕ್‌ಪಕ್ಕಳ, ಕರ್ನೂರು ಮೋಹನ್‌ರೈ ನಿರೂಪಿಸಿದರು.

ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸದಾಶಿವ ಬಿ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಸತೀಶ್‌ಎನ್‌. ಶೆಟ್ಟಿ, ಜತೆ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್‌ಶೆಟ್ಟಿ, ಜತೆ ಕೋಶಾಧಿಕಾರಿ ಪ್ರವೀಣ್‌ಬಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಪಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶಿವಪ್ರಸಾದ್‌ಶೆಟ್ಟಿ ವೇದಿಕೆಯಲ್ಲಿದ್ದರು. ವಿವಿಧ ಪ್ರಾದೇ ಶಿಕ ಸಮಿತಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಗೌ| ಪ್ರ. ಕಾರ್ಯದರ್ಶಿ ಸಿಎ ಸದಾಶಿವ ಬಿ. ಶೆಟ್ಟಿ ವಂದಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

Write A Comment