ಮುಂಬೈ

ವಿಶ್ವಕರ್ಮ ಮಹೋತ್ಸವ ಆಚರಣೆ

Pinterest LinkedIn Tumblr

Ishwar Mumbai_Sept 17_2014_004

ಮುಂಬಯಿ : ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನ್, ಮುಂಬಯಿ ಇದರ ವತಿಯಿಂದ ಸೆ. 16ರಂದು ಅಂಧೇರಿ ಪಶ್ಚಿಮದ ಜಾನಕಿ ಸಭಾಗೃಹದಲ್ಲಿ ವಿಶ್ವಕರ್ಮ ಮಹೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.

ಶ್ರೀಮತ್ ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಶ್ರೀ ಪೀಠಾಧೀಶರಾದ ಪರಮ ಪೂಜ್ಯ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಉಪಸ್ಥಿತರಿದ್ದು ಭಕ್ತರಿಗೆ ಆಶೀರ್ವಚನ ನೀಡಿದರು.

Ishwar Mumbai_Sept 17_2014_001

Ishwar Mumbai_Sept 17_2014_002

Ishwar Mumbai_Sept 17_2014_003

ಅಂದು ಬೆಳಿಗ್ಗೆ ಬಾಲಕೃಷ್ಣ ಪುರೋಹಿತ ಕುಳಾಯಿ ಅವರ ಪೌರೋಹಿತ್ಯದಲ್ಲಿ ವಿಶ್ವಕರ್ಮ ಹೋಮವು ನೆರವೇರಿತು. ಶಂಕರನಾಥ ಪುರೋಹಿತ ಮತ್ತು ವಿಪ್ರವೃಂದದ ನೇತೃತ್ವದಲ್ಲಿ ಜರಗಿದ ವಿಶ್ವಕರ್ಮ ಪೂಜೆಯಲ್ಲಿ ಉದ್ಯಮಿ ಶ್ರೀಧರ ವಿ ಆಚಾರ್ಯ ದಂಪತಿ ಪೂಜಾವ್ರತ ಕೈಗೊಂಡರು. ವಿವಿಧ ಭಜನಾ ಮಂಡಳಿಗಳಿಂದ ಭಜನಾ ಮಹೋತ್ಸವ ಜರಗಿತು.

ಮಧ್ಯಾಹ್ನ ಅನ್ನಸಂತರ್ಪಣೆಯ ನಂತರ ಅಪರಾಹ್ನ ಮಕ್ಕಳಿಗೆ ಶಾಸ್ತ್ರೀಯ ನೃತ್ಯ, ಚದ್ಮ ವೇಶ, ಭಕ್ತಿಗೀತೆ, ಗಣೇಶ್ ಎರ್ಮಾಳ್ ಬಳಗದವರಿಂದ ಭಕ್ತಿ ರಸಮಂಜರಿ ಜರಗಿತು.

ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನ್ ನ ಅಧ್ಯಕ್ಷ ನಿಟ್ಟೆ ದಾಮೋದರ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮವು ನಡೆಯಿತು. ಅಸೋಷಿಯೇಶನ್ ನ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ನಗರದ ವಿವಿಧ ಸಂಘಟನೆಗಳ ಪ್ರಮುಖರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

Write A Comment